Sunday, June 7, 2026
Homeಕರಾವಳಿಮಂಗಳೂರು: ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಯುವಕ ಸಾವು

ಮಂಗಳೂರು: ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಯುವಕ ಸಾವು

- Advertisement -
- Advertisement -

ಮಂಗಳೂರು: ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟು ಓಳಪೇಟೆ ಬಳಿ ಶನಿವಾರ ರಾತ್ರಿ ನಡೆದಿದೆ.  ಬಿಹಾರ ಮೂಲದ ಶ್ರವಣ್ ದಾಸ್ (40 ಮೃತ ಯುವಕ.

ಶ್ರವಣ್ ದಾಸ್ ಕಲ್ಕಟ್ಟದಲ್ಲಿ ಕೆಲಸ ಮುಗಿಸಿ ತೊಕ್ಕೊಟ್ಟುವಿನಲ್ಲಿರುವ ನಿವಾಸಕ್ಕೆ ಬಂದಿದ್ದರು. ಈ ವೇಳೆ ಸಾಂಬಾರ್ ತರಲೆಂದು ಹೊಟೇಲ್ ಗೆ ಹೋಗಿ ವಾಪಸ್ ರೈಲ್ವೆ ಹಳಿ ದಾಟಿ ಬರುವಾಗ ರೈಲು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಿಸೆಯಲ್ಲಿ ದೊರೆತ ಆಧಾರ್ ಕಾರ್ಡ್ ಮೂಲಕ ಗುರುತು ಪತ್ತೆ ಹಚ್ಚಿದ್ದಾರೆ. ಅವರ ಪತ್ನಿ ಮಕ್ಕಳು ಬಿಹಾರದಲ್ಲಿದ್ದು, ಶ್ರವಣ್ ದಾಸ್ ಬಾಡಿಗೆ ಕೊಠಡಿಯಲ್ಲಿ ಒಂಟಿಯಾಗಿ ಇದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!