Saturday, June 6, 2026
Homeಕರಾವಳಿಬೆಳ್ತಂಗಡಿ ಹೊಳೆಯಲ್ಲಿ ನೀರಿನ ಸುಳಿಗೆ ಸಿಕ್ಕಿ ಯುವಕ ಸಾವು !

ಬೆಳ್ತಂಗಡಿ ಹೊಳೆಯಲ್ಲಿ ನೀರಿನ ಸುಳಿಗೆ ಸಿಕ್ಕಿ ಯುವಕ ಸಾವು !

- Advertisement -
- Advertisement -

ಬೆಳ್ತಂಗಡಿ : ಇಂದು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ದೇವರಗುಂಡಿ ನದಿಯಲ್ಲಿ ಸ್ಥಾನ ಮಾಡಲು ಮೂವರು ಗೆಳೆಯರು ನೀರಿಗೆ ಇಳಿದಿದ್ದರು. ಇದರಲ್ಲಿ ಒಬ್ಬ ನೀರಿನ ಸುಳಿಗೆ ಸಿಲುಕಿದ್ದ.

ಕೂಡಲೇ ಸ್ಥಳೀಯರ ಸಹಾಯದಿಂದ ನೀರಿನಲ್ಲಿ ಹುಡುಕಾಟ ನಡೆಸಿ ಯುವಕನನ್ನು ಮೇಲೆ ಎಳೆದು ತರಲಾಯಿತು. ಪ್ರಾಥಮಿಕ ಚಿಕಿತ್ಸೆ ಮಾಡಿದಾಗ ಉಸಿರಾಟ ನಡೆಸುತ್ತಿದ್ದು ತಕ್ಷಣ ಅಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

ಮೃತಪಟ್ಟ ಯುವಕ ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ಇಸ್ಮಾಯಿಲ್ ಎಂಬವರ ಮಗ ನಬಾನ್(22) ಎಂದು ತಿಳಿದು ಬಂದಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಶವಗಾರಕ್ಕೆ ಸಾಗಿಸಲಾಗಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!