Wednesday, June 3, 2026
Homeಕರಾವಳಿಬೆಳ್ತಂಗಡಿ : ಬಸ್ಸಿನಲ್ಲಿ ಕುಸಿದು ಬಿದ್ದು ,ಲಾಯಿಲ ನಿವಾಸಿ ಸಾವು

ಬೆಳ್ತಂಗಡಿ : ಬಸ್ಸಿನಲ್ಲಿ ಕುಸಿದು ಬಿದ್ದು ,ಲಾಯಿಲ ನಿವಾಸಿ ಸಾವು

- Advertisement -
- Advertisement -

ಬೆಳ್ತಂಗಡಿ:ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಕುಸಿದು ಬಿದ್ದು  ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ.ಮೃತ ವ್ಯಕ್ತಿಯನ್ನು
ಲಾಯಿಲ ನಿವಾಸಿ ತಾಜ್ ಬಾವುಞಿ ( 57) ಎಂದು ಗುರುತಿಸಲಾಗಿದೆ.

ಇವರು ಕೆಲಸಕ್ಕೆಂದು ಬೆಳಗ್ಗೆ ಮಂಗಳೂರಿಗೆ ತೆರಳಿ ಸಂಜೆ  ಮನೆಗೆ ಹಿಂದಿರುಗಿ ಬಸ್ಸಿನಲ್ಲಿ ಬರುತಿದ್ದು ಮಂಗಳೂರಿನ ಪಡೀಲ್ ಬಳಿ  ಬಸ್ಸಿನಲ್ಲಿಯೇ    ಕುಸಿದು ಬಿದಿದ್ದು  ಕಂಡೆಕ್ಟರ್ ಸೇರಿದಂತೆ ಬಸ್ಸಲ್ಲಿದ್ದವರು ತಕ್ಷಣ ಅವರನ್ನು  ಸಮೀಪದ  ಆಸ್ಪತ್ರೆಯ ಬಳಿ ಬಸ್ ನಿಲ್ಲಿಸಿ ಚಿಕಿತ್ಸೆಗಾಗಿ  ಆಸ್ಪತ್ರೆಗೆ ಕೊಂಡು ಹೋಗಿದ್ದಾರೆ. ಅದರೆ ಅಲ್ಲಿ ವೈದ್ಯರು ಪರೀಕ್ಷಿಸಿ   ಅವರು ಮೃತ ಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಅದಲ್ಲದೇ ಅದೇ ಬಸ್ಸಿನಲ್ಲಿ ಲಾಯಿಲದ  ಅವರ ಪರಿಚಯದವರೊಬ್ಬರು  ಇದ್ದು ಅವರು ತನ್ನ ಗಂಡನ ಮೂಲಕ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮನೆಯವರು ತಕ್ಷಣ ಮಂಗಳೂರಿಗೆ ತೆರಳಿದ್ದಾರೆ.ಲಾಯಿಲ
ನೂರುಲ್ ಹುದಾ ಎಜುಕೇಶನ್ ಅಂಡ್ ಚಾರ್ಟೆಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತಿದ್ದ ಅವರು ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಜನಾನುರಾಗಿಯಾಗಿ ಕಳೆದ ನಲ್ವತ್ತು ವರ್ಷಗಳಿಂದ ಸೇವೆ ಮಾಡುತ್ತಿದ್ದರು ಮೃತರು  ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಆಗಲಿದ್ದಾರೆ.

- Advertisement -

Latest News

error: Content is protected !!