Thursday, June 4, 2026
Homeಕರಾವಳಿಸುಳ್ಯ; ಬಾಳುಗೋಡಿನಲ್ಲಿ ಡಾಂಬರೀಕರಣದ ಯಂತ್ರ ಹರಿದು ವ್ಯಕ್ತಿ ಸಾವು

ಸುಳ್ಯ; ಬಾಳುಗೋಡಿನಲ್ಲಿ ಡಾಂಬರೀಕರಣದ ಯಂತ್ರ ಹರಿದು ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ; ಡಾಂಬರೀಕರಣದ ಯಂತ್ರ ಹರಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಾಳುಗೋಡಿನಲ್ಲಿ ನಡೆದಿದೆ. ಬಾಳುಗೋಡಿನ ಮೇದಪ್ಪ ಗೌಡ(65) ಮೃತ ದುರ್ದೈವಿ.

ಬಾಳುಗೋಡಿನ ಮೇದಪ್ಪ ಗೌಡ ಎಂಬವರು ಕೊಕ್ಕೊ ಮಾರಾಟ ಮಾಡಿ ವಾಪಾಸ್ಸಾಗುತ್ತಿದ್ದಾಗ ಡಾಂಬರು ಹಾಕುತ್ತಿದ್ದ ಮೆಶಿನ್ ಡಾಂಬರು ಹಾಕುತಿತ್ತೆನ್ನಲಾಗಿದೆ. ಅದನ್ನು ಓವರ್ ಟೇಕ್ ಮಾಡಿ  ಅವರು ಮುಂದೆ ಹೋಗಿದ್ದಾರೆ. ಈ ವೇಳೆ ಬೈಕ್ ನೀರು ಹೋಗಲು ಮಾಡಿದ್ದ ಕಣಿಗೆ ಬಿದ್ದಿದ್ದು ಮೇದಪ್ಪ ಅವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಡಾಂಬರು ಹಾಕುತ್ತಿದ್ದ ಯಂತ್ರದ ಚೈನ್ ಅವರ ತಲೆಯ ಮೇಲೆ ಹರಿದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಿ ಅವರು ಮೃತಪಟ್ಟರೆನ್ನಲಾಗಿದೆ.

 ಮೃತರು ಪತ್ನಿ, ಮಗ, ಮಗಳು ಬಂಧುಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!