Friday, June 5, 2026
Homeಕರಾವಳಿಬಲೆ ಹರಡುತ್ತಿದ್ದಾಗ ಕಾಲಿಗೆ ಬಲೆ ಸಿಲುಕಿ ವ್ಯಕ್ತಿ ಸಾವು

ಬಲೆ ಹರಡುತ್ತಿದ್ದಾಗ ಕಾಲಿಗೆ ಬಲೆ ಸಿಲುಕಿ ವ್ಯಕ್ತಿ ಸಾವು

- Advertisement -
- Advertisement -

ಸುರತ್ಕಲ್: ಇಲ್ಲಿನ ಗುಡ್ಡೆ ಕೊಪ್ಲ ಸಮುದ್ರ ಕಿನಾರೆಯಲ್ಲಿ ಜೆಪ್ಪು ಬಲೆ ಹರಡುತ್ತಿದ್ದಾಗ ಬಲೆಗೆ ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಲೋಕೇಶ್ ಕೋಟ್ಯಾನ್(40) ಬಲೆಗೆ ಸಿಲುಕಿ ಮೃತಪಟ್ಟ ವ್ಯಕ್ತಿ. ಸಮುದ್ರ ದಡದಲ್ಲಿ ಸುರಕ್ಷತೆಯ ರಬ್ಬರ್ ಟ್ಯೂಬ್ ಹಾಕಿ ಈಜಿಕೊಂಡು ಬಲೆ ಬಿಡುತ್ತಿದ್ದಾಗ ಬೃಹತ್ ತೆರೆ ಬಂದಿದೆ. ಈ ವೇಳೆ, ಆಕಸ್ಮಿಕವಾಗಿ ಲೋಕೇಶ್ ಕಾಲಿಗೆ ಬಲೆ ಸಿಲುಕಿಕೊಂಡಿತ್ತು. ಬಲೆ ಬಿಡಿಸಲು ಯತ್ನಿಸಿದಾಗ ಸುರಕ್ಷತೆಯ ಟ್ಯೂಬ್ ಜಾರಿ ಬಿದ್ದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಅಲ್ಲೇ ಇದ್ದ ಮೀನುಗಾರರು ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿ ಆಗದೆ ಲೋಕೇಶ್ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!