Monday, June 17, 2024
Homeಚಿಕ್ಕಮಗಳೂರುಚಿಕ್ಕಮಗಳೂರು: ಹಾವು ಕಚ್ಚಿದ್ದನ್ನು ಮುಳ್ಳು ಚುಚ್ಚಿದೆ ಅಂದುಕೊಂಡು ಮನೆಗೆ ಬಂದು ಮಲಗಿದ ವ್ಯಕ್ತಿ; ಬೆಳಗಾಗುತ್ತಲೇ ಸಾವು

ಚಿಕ್ಕಮಗಳೂರು: ಹಾವು ಕಚ್ಚಿದ್ದನ್ನು ಮುಳ್ಳು ಚುಚ್ಚಿದೆ ಅಂದುಕೊಂಡು ಮನೆಗೆ ಬಂದು ಮಲಗಿದ ವ್ಯಕ್ತಿ; ಬೆಳಗಾಗುತ್ತಲೇ ಸಾವು

spot_img
- Advertisement -
- Advertisement -

ಚಿಕ್ಕಮಗಳೂರು:  ಹಾವು ಕಚ್ಚಿದ್ದನ್ನು ಮುಳ್ಳು ಚುಚ್ಚಿದೆ ಅಂದುಕೊಂಡು ಮನೆಗೆ ಬಂದು ಮಲಗಿದ ವ್ಯಕ್ತಿ ಬೆಳಗಾಗುತ್ತಲೇ ಸಾವನ್ನಪ್ಪಿದ ಘಟನೆ  ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಕರಕುಚ್ಚಿ ಗ್ರಾಮದ ಗಂಗಪ್ಪ (48) ಮೃತ ದುರ್ದೈವಿ..

ಗಂಗಪ್ಪ ಅವರು ಗದ್ದೆಗೆ ಕೆಲಸಕ್ಕೆ ಹೋಗಿದ್ದ ವೇಳೆ ಹಾವು ಕಡಿದಿದೆ. ಆದರೆ ಮುಳ್ಳು ಚುಚ್ಚಿದೆ ಎಂದುಕೊಂಡು ಗಂಗಪ್ಪ ಮನೆಗೆ ಬಂದಿದ್ದಾರೆ . ಈ ವೇಳೆ ಗಂಗಪ್ಪ ಅವರ ಕಾಲಿನಲ್ಲಿ ಗಾಯದ ಕಲೆಗಳನ್ನು ಕಂಡು ಮನೆಮಂದಿ ಕೇಳಿದಾಗ ಮುಳ್ಳು ಚುಚ್ಚಿ ಗಾಯವಾಗಿರಬೇಕು ಎಂದು ಹೇಳಿ ಊಟ ಮಾಡಿ ಮಲಗಿದ್ದಾರೆ. ಆದರೆ ಬೆಳಿಗ್ಗೆ ಮನೆಮಂದಿ ಎದ್ದು ಗಂಗಪ್ಪ ಅವರನ್ನು ಎಬ್ಬಿಸಿದರೆ ಏಳಲೇ ಇಲ್ಲ ಬಳಿಕ ಪರಿಶೀಲಿಸಿದಾಗ ಗಂಗಪ್ಪ ಅವರ ಕಾಲಿಗೆ ಮುಳ್ಳಿನ ಗಾಯವಾಗಿರುವುದಲ್ಲ ಬದಲಿಗೆ ಕಾವು ಕಚ್ಚಿ ಗಾಯವಾಗಿರುವುದು ಬೆಳಕಿಗೆ ಬಂದಿದೆ ಆದರೆ ಅಷ್ಟೋತ್ತಿಗಾಗಲೇ ಗಂಗಪ್ಪ ಸಾವನ್ನಪ್ಪಿದ್ದರು. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!