Monday, June 17, 2024
Homeಕರಾವಳಿಉಡುಪಿಉಡುಪಿ: ಕೊಂಕಣ ರೈಲ್ವೇ ಹಳಿಯಲ್ಲಿ ಬಿರುಕು; ಪತ್ತೆ ಹಚ್ಚಿ ಸಂಭಾವ್ಯ ಅವಘಡ ತಪ್ಪಿಸಿದ ಟ್ರ್ಯಾಕ್ ಮೇಂಟೇನರ್...

ಉಡುಪಿ: ಕೊಂಕಣ ರೈಲ್ವೇ ಹಳಿಯಲ್ಲಿ ಬಿರುಕು; ಪತ್ತೆ ಹಚ್ಚಿ ಸಂಭಾವ್ಯ ಅವಘಡ ತಪ್ಪಿಸಿದ ಟ್ರ್ಯಾಕ್ ಮೇಂಟೇನರ್ ಗೆ ನಗದು ಬಹುಮಾನ

spot_img
- Advertisement -
- Advertisement -

ಉಡುಪಿ: ಕೊಂಕಣ ರೈಲ್ವೇ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವೆಲ್ಡಿಂಗ್ ಫೆಲ್ಯೂರ್ ಪತ್ತೆಯಾದ ಕಾರಣ ಸಂಭಾವ್ಯ ಅವಘಡವೊಂದು ತಪ್ಪಿ ಹೋಗಿದೆ..

ಉಡುಪಿ ಜಿಲ್ಲೆಯ ಪಡುಬಿದ್ರಿ- ಇನ್ನಂಜೆ ಮಾರ್ಗ ಮಧ್ಯೆ ಹಳಿಯಲ್ಲಿ ಬಿರುಕು ಕಾಣಿಸಿದ್ದು, ಕೊಂಕಣ ರೈಲ್ವೇಯಲ್ಲಿ ಟ್ರ್ಯಾಕ್ ನಿರ್ವಾಹಕ ಆಗಿರುವ ಪ್ರದೀಪ್ ಶೆಟ್ಟಿ ಹಳಿ ಪರಿಶೀಲನೆ ವೇಳೆ ಬಿರುಕನ್ನು ಪತ್ತೆ ಹಚ್ಚಿದ್ದಾರೆ.

ರಾತ್ರಿ ವೇಳೆ ಪ್ರದೀಪ್ ಶೆಟ್ಟಿ ಟ್ರ್ಯಾಕ್ ಪರಿಶೀಲನೆ ಮಾಡುತ್ತಿದ್ದ ವೇಳೆ‌ ಬಿರುಕು ಕಂಡುಬಂದಿದ್ದು ತಕ್ಷಣ ಮುನ್ನೆಚ್ಚರಿಕಾ ಕ್ರಮ ವಹಿಸಿ
ವೆಲ್ಡಿಂಗ್ ಫೈಲ್ಯೂರ್ ಆಗಿದ್ದ ಹಳಿಯನ್ನು ರೈಲ್ವೇ ಇಲಾಖೆಯ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ

ಸಕಾಲಕ್ಕೆ ಹಳಿ ಬಿರುಕು ಪರಿಶೀಲಿಸಿ ದುರಸ್ತಿಗೊಳಿಸುವ ಮೂಲಕ ಸಂಭಾವ್ಯ ಅವಘಡ ತಪ್ಪಿಸಿದ ಟ್ರ್ಯಾಕ್ ಮೇಂಟೇನರ್ ಪ್ರದೀಪ್ ಶೆಟ್ಟಿ ಅವರಿಗೆ ಕೊಂಕಣ ರೈಲ್ವೇ ಉಡುಪಿ ಸೀನಿಯರ್ ಇಂಜಿನಿಯರ್ ಗೋಪಾಲಕೃಷ್ಣ 25000 ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

- Advertisement -
spot_img

Latest News

error: Content is protected !!