- Advertisement -
- Advertisement -
ಕಾಸರಗೋಡು: ಸೇತುವೆಯಿಂದ ನದಿಗೆ ಹಾರಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಉಳಿಯತ್ತಡ್ಕ ಶಿರಿಬಾಗಿಲಿನ ಹಸೈನಾರ್ (46) ಮೃತ ವ್ಯಕ್ತಿ.
ನನ್ನ ಜೀವನ ಅಂತ್ಯಗೊಳಿಸುವುದಾಗಿ ಕುಟುಂಬದ ವಾಟ್ಸಪ್ ಗ್ರೂಪ್ ನಲ್ಲಿ ಶುಕ್ರವಾರ ಮುಂಜಾನೆ ಸಂದೇಶ ಕಳುಹಿಸಿದ್ದ ಹಸೈನಾರ್ ಬಳಿಕ ಕಾರಿನಲ್ಲಿ ಬಂದು ಚಂದ್ರಗಿರಿ ಸೇತುವೆಯಲ್ಲಿ ನಿಲ್ಲಿಸಿ ನಂತರ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ನದಿಗೆ ವ್ಯಕ್ತಿ ಹಾರುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿರೋರ್ವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು,ಅಗ್ನಿಶಾಮಕ ದಳದ ಸಿಬ್ಬಂದಿ,ನಾಗರಿಕರು ಶೋಧ ನಡೆಸಿದ್ದರು. ಘಟನೆ ನಡೆದ ಒಂದು ಕಿ.ಮೀ ದೂರದ ನದಿ ತೀರದಲ್ಲಿ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
- Advertisement -