Saturday, June 6, 2026
Homeಕರಾವಳಿಕಡಬ; ಮಕ್ಕಳಾಗಿಲ್ಲವೆಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

ಕಡಬ; ಮಕ್ಕಳಾಗಿಲ್ಲವೆಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಕಡಬ; ಮಕ್ಕಳಾಗಿಲ್ಲವೆಂದು ಮನನೊಂದು ವ್ಯಕ್ತಿ ವಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ ಭಾನುವಾರ ನಡೆದಿದೆ.

ಕಾಣಿಯೂರು ಗ್ರಾಮದ ಅಬ್ಬಡದ ಲೋಕಯ್ಯ (43) ಮೃತ ದುರ್ದೈವಿ. ಇವರಿಗೆ 20 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಅವರಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮನನೊಂದು ಅವರು ಕುಡಿಯಲು ಆರಂಭಿಸಿದ್ದರು ಎನ್ನಲಾಗಿದೆ. ಅಲ್ಲದೇ ಸುಮಾರು 4 ವರ್ಷಗಳಿಂದ ಲೋಕಯ್ಯರವರು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ಆರೋಗ್ಯ ಏರುಪೇರಾಗಿ ಹದಗೆಟ್ಟು ನಿತ್ರಾಣಗೊಂಡಿದ್ದರು ಎನ್ನಲಾಗಿದೆ.

ಭಾನುವಾರ ಪತ್ನಿ ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಬಂದ ವೇಳೆ ಮನೆಯ ಹಾಲ್ ನಲ್ಲಿ ಪತಿ ಬಿದ್ದುಕೊಂಡಿದ್ದು , ಅವರ ಬಾಯಿಯಿಂದ ಬಿಳಿ ನೊರೆ ಬಂದಿದ್ದು , ಘಾಟು ವಾಸನೆ ಬರುತ್ತಿದ್ದು, ಮುಟ್ಟಿ ನೋಡಿದಾಗ ಮೈ ತಣ್ಣಗಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!