Thursday, April 25, 2024
Homeಕರಾವಳಿಫೇಸ್ ಬುಕ್ ಮೂಲಕ ಸ್ನೇಹ ಬೆಳೆಸಿಕೊಂಡು ಸುಬ್ರಹ್ಮಣ್ಯದ ಯುವಕನಿಂದ ಮೋಸ: ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

ಫೇಸ್ ಬುಕ್ ಮೂಲಕ ಸ್ನೇಹ ಬೆಳೆಸಿಕೊಂಡು ಸುಬ್ರಹ್ಮಣ್ಯದ ಯುವಕನಿಂದ ಮೋಸ: ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

spot_img
- Advertisement -
- Advertisement -

ಸುಬ್ರಹ್ಮಣ್ಯ:  ಫೇಸ್ ಬುಕ್ ಮೂಲಕ ಸ್ನೇಹ ಬೆಳೆಸಿಕೊಂಡು ಬಳಿಕ ಪ್ರೀತಿಯ ಹೆಸರಲ್ಲಿ ದೈಹಿಕ ಸಂಬಂಧ ಬೆಳೆಸಿ ಯುವತಿಯೊಬ್ಬಳಿಗೆ ಮೋಸ ಮಾಡಿದ್ದಾನೆಂದು ಸುಬ್ರಹ್ಮಣ್ಯದ ಯುವಕನೊಬ್ಬನ ವಿರುದ್ಧ ದೂರು ದಾಖಲಾಗಿದೆ.

ಸುಬ್ರಹ್ಮಣ್ಯದ ಕಲ್ಲಪಣೆ ಎಂಬಲ್ಲಿನ ರಕ್ಷಿತ್ ಕುಮಾರ್ ಎಂಬ ಯುವಕನ ವಿರುದ್ದ ದೂರು ತುಮಕೂರಿನ ಕುಣಿಗಲ್ ಯುವತಿಯೋರ್ವಳು ಇದೀಗ ಠಾಣೆಯ ಮೆಟ್ಟಿಲೇರಿದ್ದಾಳೆ. ಯುವಕ ರಕ್ಷಿತ್ ದೈಹಿಕ ಸಂಪರ್ಕ ಬೆಳೆಸಿ ದೈಹಿಕ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾಳೆ. ಅಲ್ಲದೇ ತಾನು ಒಂದು ತಿಂಗಳ ಗರ್ಭವತಿಯಾಗಿದ್ದು, ಬೆಂಗಳೂರಿನ ಕ್ಲಿನಿಕ್ ವೊಂದರಲ್ಲಿ ಗರ್ಭಪಾತ ಮಾಡಿಸಿರುವುದಾಗಿ ದೂರು ದಾಖಲಿಸಿದ್ದಾಳೆ.

ಯುವಕ ಮತ್ತು ಯುವತಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿ ಬಳಿಕ ಪ್ರೀತಿಗೆ ತಿರುಗಿ ಯುವತಿಯು ತುಮಕೂರಿನಿಂದ ಬಂದು ಸುಬ್ರಹ್ಮಣ್ಯದ ರಕ್ಷಿತ್ ನೊಂದಿಗೆ ವಾಸಿಸುತ್ತಿದ್ದಳು . ಹೀಗೇ ಒಂದು ತಿಂಗಳ ಕಾಲ ಒಂದೇ ಮನೆಯಲ್ಲಿದ್ದರು ಎನ್ನಲಾಗಿದೆ. ಬಳಿಕ ಈಕೆ ಗಂಡ ಕಾಣೆಯಾಗಿರುವುದಾಗಿ ಠಾಣೆಗೆ ದೂರು ನೀಡಿದ್ದಳು. ಇದೀಗ ಮತ್ತೊಂದು ದೂರು ನೀಡಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ದೈಹಿಕ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾಳೆ ಎನ್ನಲಾಗಿದೆ. ಅಲ್ಲಗೇ ಇದೀಗ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!