Thursday, May 2, 2024
Homeಕ್ರೀಡೆಭಾರತ ತಂಡದ ಮಾಜಿ ಕ್ರಿಕೆಟಿಗನಿಗೆ ಪಾರ್ಶ್ವವಾಯು: ಬೆಂಗಳೂರಿನ ಆಸ್ಪತ್ರೆಗೆ ದಾಖಲು

ಭಾರತ ತಂಡದ ಮಾಜಿ ಕ್ರಿಕೆಟಿಗನಿಗೆ ಪಾರ್ಶ್ವವಾಯು: ಬೆಂಗಳೂರಿನ ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಆಟಗಾರ ಬಿ.ಎಸ್.ಚಂದ್ರಶೇಖರ್ ಅವರಿಗೆ ಅನಾರೋಗ್ಯ ಕಾಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ವಕ್ತಾರ ವಿನಯ್ ಮೃತ್ಯುಂಜಯ ಈ ಬಗ್ಗೆ ಮಾಹಿತಿ ನೀಡಿದ್ದು, ಬಿ.ಎಸ್. ಚಂದ್ರಶೇಖರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆರೋಗ್ಯವಾಗಿದ್ದರು. ಆಯಾಸ ಮತ್ತು ಉಸಿರಾಟದ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಂತರ ಎರಡು ದಿನದಲ್ಲಿ ಮನೆಗೆ ಮರಳಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

75 ವರ್ಷದ ಪ್ರಾಯದ ಬಿ.ಎಸ್. ಚಂದ್ರಶೇಖರ್ ಅವರು ಮೈಸೂರು ಮೂಲದವರು. ಲೆಗ್ ಸ್ಪಿನ್ನರ್ ಆಗಿದ್ದ ಅವರು 1964ರಿಂದ 1979ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಭಾರತದ ಪರ 58 ಟೆಸ್ಟ್ ಪಂದ್ಯವಾಡಿದ್ದ ಅವರು, 242 ವಿಕೆಟ್ ಪಡೆದಿದ್ದರು. 60ರ ದಶಕದಲ್ಲಿ ಎರ್ರಪಳ್ಳಿ ಪ್ರಸನ್ನ, ಬಿಷನ್ ಸಿಂಗ್ ಬೇಡಿ ಮತ್ತು ಬಿ ಎಸ್ ಚಂದ್ರಶೇಖರ್ ಜೋಡಿ ಪ್ರಸಿದ್ದವಾಗಿತ್ತು.

- Advertisement -
spot_img

Latest News

error: Content is protected !!