Thursday, June 4, 2026
Homeತಾಜಾ ಸುದ್ದಿಪ್ರೇಮಿಗಳ ದಿನಕ್ಕೆ ಪ್ರೇಯಸಿಗೆ ಗಿಫ್ಟ್ ನೀಡಲು ದುಡ್ಡಿಲ್ಲದೇ ಪರದಾಟ; ಕೊನೆಗೆ ಮೇಕೆ ಕದ್ದು ಸಿಕ್ಕಿ ಬಿದ್ದ...

ಪ್ರೇಮಿಗಳ ದಿನಕ್ಕೆ ಪ್ರೇಯಸಿಗೆ ಗಿಫ್ಟ್ ನೀಡಲು ದುಡ್ಡಿಲ್ಲದೇ ಪರದಾಟ; ಕೊನೆಗೆ ಮೇಕೆ ಕದ್ದು ಸಿಕ್ಕಿ ಬಿದ್ದ ಲವರ್ ಬಾಯ್

- Advertisement -
- Advertisement -

ಚೆನ್ನೈ: ಪ್ರೇಮಿಗಳ ದಿನದಂದು ತನ್ನ ಮನದನ್ನೆಗೆ ಉಡುಗೊರೆ ನೀಡಲು ದುಡ್ಡಿಲ್ಲ ಎಂದು ಮೇಕೆ ಕದ್ದು ಮಾರಾಟ ಮಾಡಿ ದುಡ್ಡು ಮಾಡೋಣ ಎಂದು ಪ್ಲ್ಯಾನ್ ಮಾಡಿ ಯುವಕನೊಬ್ಬ ಸಿಕ್ಕಿ ಬಿದ್ದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮಲಯರಸಂಕುಪ್ಪಂನಲ್ಲಿ ನಡೆದಿದೆ. ಅರವಿಂದ್ ಕುಮಾರ್ ಹಾಗೂ ಆತನ ಮೋಹನ್ ಸಿಕ್ಕಿ ಬಿದ್ದವರು.

ಗೆಳತಿಗೆ ಗಿಫ್ಟ್ ನೀಡಲು ದುಡ್ಡಿಲ್ಲ ಎಂದು ಮೇಕೆಯೊಂದು ಕದ್ದು ಮಾರಾಟ ಮಾಡಿ ದುಡ್ಡು ಹೊಂದಿಸಬಹುದು ಎಂದು ಪ್ಲ್ಯಾನ್ ಮಾಡಿದ ಅರವಿಂದ್ ಅದಕ್ಕಾಗಿ ತನ್ನ ಜೊತೆ ಸ್ನೇಹಿತ ಮೋಹನ್ ನನ್ನು ಸೇರಿಸಿಕೊಂಡಿದ್ದಾನೆ. ಇಬ್ಬರು ಸೇರಿ

ಹತ್ತಿರದ ಹಳ್ಳಿಯ ರೈತನ ಮನೆಯಿಂದ ಮೇಕೆಯನ್ನು ಕದ್ದಿದ್ದಾರೆ. ಕಳ್ಳತನ ಮಾಡಿ ಹಿಂದಿರುವಾಗ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾರೆ. ಅವರು ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಿಸದಾಗ ನಿಜಾಂಶ ಬಾಯ್ಬಿಟ್ಟಿದ್ದಾರೆ .  ಒಟ್ಟಿನಲ್ಲಿ ಪ್ರೇಯಸಿಯ ಮನ ಗೆಲ್ಲಲು ಹೋದ ಅರವಿಂದ್ ಇದೀಗ ಆಕೆಯ ಮುಂದೆ ತಲೆ ತಗ್ಗಿಸುವಂತಾಗಿದೆ.

- Advertisement -

Latest News

error: Content is protected !!