Friday, June 5, 2026
Homeಕರಾವಳಿಪುತ್ತೂರು: ಹಣ ಕೇಳಿದ್ದಕ್ಕೆ ಇಲ್ಲ ಎಂದ ಅಣ್ಣನಿಗೆ, ಕತ್ತಿಯಿಂದ ಕಡಿದ ತಮ್ಮ

ಪುತ್ತೂರು: ಹಣ ಕೇಳಿದ್ದಕ್ಕೆ ಇಲ್ಲ ಎಂದ ಅಣ್ಣನಿಗೆ, ಕತ್ತಿಯಿಂದ ಕಡಿದ ತಮ್ಮ

- Advertisement -
- Advertisement -

ಪುತ್ತೂರು: ಹಣ ಕೇಳಿದಾಗ ನನ್ನ ಬಳಿ ಇಲ್ಲ ಎಂದು ಹೇಳಿದ ಅಣ್ಣನಿಗೆ ತಮ್ಮನೇ ಕತ್ತಿಯಿಂದ ಕಡಿದ ಘಟನೆ ಚಿಕ್ಕಮುಡ್ನೂರು ಗಡಿಕಲ್ಲು ಎಂಬಲ್ಲಿ ನಡೆದಿಗೆ. ಗಡಿಕಲ್ಲು ಶಿವಪ್ಪ(45 ವ.)ಎಂಬವರಿಗೆ ಅವರ ತಮ್ಮ ಬಾಲಕೃಷ್ಣ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.


ಏ.27ರಂದು ಸಂಜೆ ಶಿವಪ್ಪ ಅವರು ಗಡಿಕಲ್ಲುವಿನಲ್ಲಿರುವ ನನ್ನ ತಂಗಿ ಭವಾನಿಯ ಮನೆಗೆ ಹೋಗಿ ತಂಗಿ ಮತ್ತು ಬಾವನೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕೈಯಲ್ಲಿ ಹಿಡಿದುಕೊಂಡು ಬಂದ ತಮ್ಮ ಬಾಲಕೃಷ್ಣ ನನಗೆ ಹಣ ಕೊಡು ಎಂದು ಕೇಳಿದ್ದಾರೆ. ಆಗ ಶಿವಪ್ಪ ಅವರು ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಆಗ ಬಾಲಕೃಷ್ಣ ನೀನು ದೊಡ್ಡ ಜನನಾ? ಎಂದು ಬೈದು ಕೈಯಲ್ಲಿದ್ದ ಕತ್ತಿಯಿಂದ ಕುತ್ತಿಗೆಯ ಎಡಭಾಗಕ್ಕೆ ಹಾಗೂ ಹಣೆಯ ಎಡ ಭಾಗಕ್ಕೆ ಏಕಾಎಕಿಯಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿವಪ್ಪ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಾಯಾಳು ಶಿವಪ್ಪ ಅವರು ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಕಲಂ 504, 324ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!