Sunday, June 29, 2025
Homeಕರಾವಳಿಮಂಗಳೂರುಮಂಗಳೂರು: ಅಪ್ರಾಪ್ತೆಯ ಮೇಲೆ ಕಾರಿನಲ್ಲೇ ಅತ್ಯಾ*ಚಾರ, ಆರೋಪಿ ಅರೆಸ್ಟ್

ಮಂಗಳೂರು: ಅಪ್ರಾಪ್ತೆಯ ಮೇಲೆ ಕಾರಿನಲ್ಲೇ ಅತ್ಯಾ*ಚಾರ, ಆರೋಪಿ ಅರೆಸ್ಟ್

spot_img
- Advertisement -
- Advertisement -

ಮಂಗಳೂರು: ಅಪ್ರಾಪ್ತೆಯನ್ನು ಬೀಚ್ ಗೆಂದು ಕಾರಿನಲ್ಲಿ ಕರೆದೊಯ್ದು ಕಾರಿನಲ್ಲೇ ಆಕೆಯ ಮೇಲೆ ಅತ್ಯಾ*ಚಾರವೆಸಗಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಬಂಧಿತ ಆರೋಪಿ.

ಆರೋಪಿ ಕೆಲ್ವಿನ್ ಅಪ್ರಾಪ್ತೆಯೋರ್ವಳನ್ನ ಇನ್ಸಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಚಾಟಿಂಗಲ್ಲೇ ಆಕೆಯನ್ನ ಪ್ರೀತಿಸೋದಾಗಿ ನಂಬಿಸಿದ್ದ ಫೋನ್ ಕರೆ ಮಾಡಿ ಕಳೆದ ಗುರುವಾರ ಆರೋಪಿ ಅಪ್ರಾಪ್ತೆಯನ್ನ ಆಕೆಯ ಮನೆ ಬಳಿಯೇ ಭೇಟಿ ಮಾಡಿದ್ದು, ಕೆಲ್ವಿನ್ ಉಳ್ಳಾಲದ ಮನೆಗೆ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಆಕೆಯನ್ನು ಕುತ್ತಾರು ಸಮೀಪದ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಮ್ ಕೇಳಿದ್ದಾನೆ. ಆದರೆ, ಬಾಲಕಿಯಾಗಿರುವ ಕಾರಣ ಲಾಡ್ಜ್ ಸಿಬ್ಬಂದಿ ರೂಮ್ ಕೊಟ್ಟಿರಲಿಲ್ಲ. ಸೋಮೇಶ್ವರ ಸಮುದ್ರ ತೀರಕ್ಕೆ ಕರೆದೊಯ್ದು ಕಾರೊಳಗೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!