Thursday, April 25, 2024
Homeಕರಾವಳಿಮಂಗಳೂರು: ಮದುವೆಯಾಗುವುದಾಗಿ ಹೇಳಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ, 1.5 ಕೋಟಿ ರೂ. ವಂಚನೆ: ವಿಟ್ಲದ...

ಮಂಗಳೂರು: ಮದುವೆಯಾಗುವುದಾಗಿ ಹೇಳಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ, 1.5 ಕೋಟಿ ರೂ. ವಂಚನೆ: ವಿಟ್ಲದ ಆರೋಪಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಮಂಗಳೂರು: ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸ್ತವ್ಯವಿದ್ದ ಮಹಿಳೆಯ ಸ್ನೇಹ ಗಳಿಸಿ ಮದುವೆಯಾಗು ವುದಾಗಿ ನಂಬಿಸಿ ಅತ್ಯಾಚಾರಗೈದು ಸುಮಾರು 1.5 ಕೋಟಿ ರೂಪಾಯಿ ವಂಚನೆಗೈದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಟ್ಲ ಬೈರಿಕಟ್ಟೆಯ ಫಯಾಝ್ (30) ಬಂಧಿತ ಆರೋಪಿ.

ಮಹಿಳೆಯ ಕುಟುಂಬವು 2012ರಲ್ಲಿ ಸುರತ್ಕಲ್‌ನಲ್ಲಿದ್ದು, ಆಗಲೇ ಇವರಿಬ್ಬರಿಗೆ ಪರಿಚಯವಾಗಿತ್ತು. ಆ ಪರಿಚಯ ಆತ್ಮೀಯತೆಗೆ ತಿರುಗಿತ್ತು. ಮಹಿಳೆಯ ಪತಿ ಉದ್ಯಮಿಯಾಗಿದ್ದು, ಆರ್ಥಿಕವಾಗಿ ಬಲಿಷ್ಠರಾಗಿದ್ದರು. ಇದರ ಮೇಲೆ ಕಣ್ಣಿಟ್ಟ ಆರೋಪಿಯು ಮಹಿಳೆಯ ವಿಶ್ವಾಸ ಗಳಿಸಿದ್ದ. ಕಳೆದ 4 ವರ್ಷದ ಹಿಂದೆ ಮಹಿಳೆಯ ಕುಟುಂಬವು ಸುರತ್ಕಲ್‌ನಿಂದ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಬಂದು ವಾಸ್ತವ್ಯ ಹೂಡಿತ್ತು. ಆ ಬಳಿಕ ಆಕೆಯ ಜತೆ ಅತ್ಯಂತ ಸಲುಗೆಯಿಂದ ವರ್ತಿಸಲು ಆರಂಭಿಸಿದ ಆರೋಪಿಯು ಅತ್ಯಾಚಾರ ಎಸಗಿದ್ದಲ್ಲದೆ ಸುಮಾರು 1.5 ಕೋ.ರೂ.ವನ್ನು ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ಫಯಾಝ್ ಇತ್ತೀಚೆಗೆ ಬೇರೊಂದು ಯುವತಿಯ ಜತೆ ಮದುವೆಗೆ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಹಿಳೆ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಲೋಕೇಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿಗೆ ನ್ಯಾಯಾಂಗ ಬಂಧನವಾಗಿದೆ.

- Advertisement -
spot_img

Latest News

error: Content is protected !!