ಮುಂಬೈ: 15ನೆಯ ಆವೃತ್ತಿಯ ಐಪಿಎಲ್ ಪದ್ಯಂದ ಸಮಯ ಬದಲಾವಣೆಯಾಗಿರುವ ಬಗ್ಗೆ ಮೂಲಗಳಿಂದ ಮಾಹಿತಿ ದೊರಕಿದ್ದು, 7.30 ಕ್ಕೆ ಆರಂಭವಾಗುತ್ತಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಅರ್ಧ ಗಂಟೆ ಲೇಟಾಗಿ ಆರಂಭಿಸುವಂತೆ ಬಿಸಿಸಿಐ ಒಪ್ಪಿಗೆ ಸೂಚಿಸಿರುವ ಕುರಿತು ವರದಿಯಾಗಿದೆ.
ಮೇ 29 ಭಾನುವಾರದಂದು ಐಪಿಎಲ್ ಫೈನಲ್ ಪಂದ್ಯವನ್ನು ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ಈಗಾಗಲೇ ವೇಳಪಟ್ಟಿ ನಿಗದಿಪಡಿಸಲಾಗಿದೆ. ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭ ನಡೆಸುವ ದೃಷ್ಟಿಯಿಂದ ಪದ್ಯವನ್ನು ರಾತ್ರಿ 7.30ರ ಬದಲಾಗಿ 8 ಗಂಟೆಗೆ ಆರಂಭಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಸಮಾರೋಪ ಸಮಾರಂಭವು ಸಂಜೆ 6.30ಕ್ಕೆ ಮತ್ತು ಪದ್ಯಂದ ಬಳಿಕ 50 ನಿಮಿಷಗಳ ಕಾಲ ನಡೆಯಲಿದೆ. ಈ ಸಮಾರಂಭದಲ್ಲಿ ಹಲವಾರು ಗಣ್ಯರು ಹಾಗೂ ಬಾಲಿವುಡ್ ಸ್ಟಾರ್ ಗಳು ಭಾಗವಹಿಸಲಿದ್ದಾರೆ.
ಈಗಾಗಲೇ ಐಪಿಎಲ್‍ನ ಕಡೆಯ ಪಂದ್ಯಗಳು ನಡೆಯುತ್ತಿದ್ದು, ಗುಜರಾತ್ ಮತ್ತು ಲಕ್ನೋ ತಂಡಗಳು ಪ್ಲೇ ಆಫ್‍ಗೆ ಎಂಟ್ರಿ ಕೊಟ್ಟಿದ್ದು, ಮತ್ತೆರಡು ತಂಡಗಳು ಪ್ಲೇ ಆಫ್‍ಗೇರುವ ಅವಕಾಶ ಹೊಂದಿರುತ್ತದೆ. ಈ ಅವಕಾಶಕ್ಕೆ ಡೆಲ್ಲಿ ಮತ್ತುಆರ್ಸಿಬಿ ತಂಡ ತೀವ್ರ ಪೈಪೋಟಿ ನಡೆಸುತ್ತಿದೆ.
