Wednesday, June 17, 2026
Homeಕರಾವಳಿಬೆಳ್ತಂಗಡಿ : ದಲಿತ ವಿದ್ಯುತ್ ಲೈನ್ ಮ್ಯಾನ್ ಗೆ ಹಲ್ಲೆ ಪ್ರಕರಣ:ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ : ದಲಿತ ವಿದ್ಯುತ್ ಲೈನ್ ಮ್ಯಾನ್ ಗೆ ಹಲ್ಲೆ ಪ್ರಕರಣ:ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಉಜಿರೆ ಉಪವಿಭಾಗದ ಕೊಕ್ಕಡ ಮೆಸ್ಕಾಂ ಶಾಖೆಯಲ್ಲಿ ಸುಮಾರು 7 ವರ್ಷಗಳಿಂದ ಶಿಬಾಜೆ ಗ್ರಾಮದಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಉಮೇಶ್ ಎಂಬವರು ಫೆ.26 ರಂದು ಸುಮಾರು 12 ಗಂಟೆಗೆ ಬೆಳ್ತಂಗಡಿ ತಾಲೂಕು ಗ್ರಾಮದ ನಿರಾಣ ಎಂಬಲ್ಲಿ ಪೊಸೋಡಿ ಬಂಗೇರಡ್ಕ ಎಂಬಲ್ಲಿಗೆ ಹೊಸದಾಗಿ ವಿದ್ಯುತ್‌ ಸಂಪರ್ಕದ ಕೆಲಸವನ್ನು ಉಮೇಶ್ ಮತ್ತು ಇಲಾಖೆಯಲ್ಲಿ ಟೆಂಡರ್ ಮೇಲೆ ಮಾಡಿಕೊಂಡಿರುವ ಪ್ರಕಾಶ್, ರಾಮಣ್ಯ ಎಂಬವರು ಮಾಡುತ್ತಿದ್ದರು. ಆಗ ಆರೋಪಿ ಮಾಧವ ಗೌಡ ಎಂಬವರು  ಜೀಪಿನಲ್ಲಿ ಉಮೇಶ್ ಬಳಿ ಬಂದು “ಕರೆಂಟ್ ಕಂಬದ ಲೈನ್ ಗಳಿಗೆ ತಾಗಿದ ಮರಗಳನ್ನು ಕಡಿಯಿರಿ” ಎಂದು ಹೇಳಿದ್ದಾರೆ. ಆಗ ಉಮೇಶ್ ವಿದ್ಯುತ್‌ ಸಂಪರ್ಕ ಕಡಿತ ಮಾಡಿ ಮರದ ಗೆಲ್ಲು ಗಳನ್ನು ಕಡಿಯುವುದಾಗಿ ತಿಳಿಸಿದ್ದಾರೆ.  ಆಗ ಆರೋಪಿ ಏಕಾಏಕಿ ನೀನು ಪರಿಶಿಷ್ಟ ಪಂಗಡಕ್ಕೆ ಸೇರಿದವನಾಗಿದ್ದು, ನೀನು ಬಳ್ಳಾರಿಯಿಂದ ಇಲ್ಲಿಗೆ ಬಂದು ನಿನ್ನ ಕೆಲಸವನ್ನು ಮಾಡು ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ, ಎಂದು ದೂಡಿ ಹಾಕಿ ಜೀವ ಬೆದರಿಕೆ ಒಮ್ಮೆ ಜಾತಿ ನಿಂದನೆ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಈ ಬಗ್ಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಮಾಧವ ಗೌಡ (34)ವರ್ಷ ಎಂಬವರನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ತಂಡ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!