Saturday, June 6, 2026
Homeಕರಾವಳಿಮಂಗಳೂರು: ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಯುವಕನ ಬಂಧನ

ಮಂಗಳೂರು: ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಯುವಕನ ಬಂಧನ

- Advertisement -
- Advertisement -

ಮಂಗಳೂರು: ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಯುವಕನನ್ನು ಬಂಧಿಸಿರುವ ಘಟನೆ ಮಂಗಳೂರು ನಗರದ ಕುಲಶೇಖರದಲ್ಲಿ ನಡೆದಿದೆ.

ಮುಂಜಾನೆ ಸುಮಾರು 2.45ರ ವೇಳೆಗೆ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕುಲಶೇಖರದ ಕಿರಣ್ ಎಂಟರ್‌ಪ್ರೈಸಸ್ ಕಟ್ಟಡದ ಬಳಿ ಸಂಶಯಾಸ್ಪದ ರೀತಿಯಲ್ಲಿದ್ದ ಯುವಕನನ್ನು ಹಿಡಿದು ವಿಚಾರಿಸಿದಾಗ ಆತ ಮೂಡುಶೆಡ್ಡೆ ಶಿವನಗರದ ದೀಪಕ್ (27) ಎಂದಿದ್ದಾನೆ.

ವಿಚಾರಣೆ ವೇಳೆ ಆತ ಸರಿಯಾದ ಉತ್ತರ ನೀಡದ ಕಾರಣ ಯಾವುದೋ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಲವಾದ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!