Sunday, May 19, 2024
Homeಕರಾವಳಿಮಂಗಳೂರು: ಪೊಲೀಸರ ಹೆಸರಿನಲ್ಲಿ ವಂಚನೆ:ಗ್ರಾಮ ಪಂಚಾಯತ್ ಸದಸ್ಯನ ಬಂಧನ

ಮಂಗಳೂರು: ಪೊಲೀಸರ ಹೆಸರಿನಲ್ಲಿ ವಂಚನೆ:ಗ್ರಾಮ ಪಂಚಾಯತ್ ಸದಸ್ಯನ ಬಂಧನ

spot_img
- Advertisement -
- Advertisement -

ಮಂಗಳೂರು: ಪೊಲೀಸರ ಹೆಸರಿನಲ್ಲಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು  ಬಂಧಿಸಲಾಗಿದೆ. ಪಾವೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್‌ ಖಾದರ್ ರಿಜ್ವಾನ್ ಬಂಧಿತ ಆರೋಪಿ.

2021 ನೇ ಡಿಸೆಂಬರ್ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿತ್ತು.  ಈ ಪ್ರಕರಣದಲ್ಲಿನ ಆರೋಪಿಯು ದಸ್ತಗಿರಿಯಾಗಿರಲಿಲ್ಲ. ಈತನ ದಸ್ತಗಿರಿಗಾಗಿ ಹುಡುಕಾಡುತ್ತಿದ್ದರು. ಈ ಸಮಯದಲ್ಲಿ ಆತನನ್ನು ಸಂಪರ್ಕಿಸಿದ ಇಬ್ಬರು ಪ್ರಕರಣದಲ್ಲಿ ಹೆಸರನ್ನು ತೆಗೆಯಲು ಪೊಲೀಸರಿಗೆ ಹಣ ನೀಡಿ ಅವರ ಜೊತೆ ಪ್ರಭಾವ ಬೀರಿ ಮಾತುಕತೆ ನಡೆಸಿ ಕೇಸಿನಿಂದ ಹೆಸರನ್ನು ತೆಗೆಯುತ್ತೇವೆ ಎಂದು ಹೇಳಿ ಆತನಿಂದ 3 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ ಹಂತ ಹಂತವಾಗಿ ಒಟ್ಟು 2,95,000/- ಹಣವನ್ನು ಪಡೆದುಕೊಂಡಿದ್ದರು. ಈ ಹಣವನ್ನು ಪಡೆದ ಬಳಿಕ ಹಣ ನೀಡಿದ ವ್ಯಕ್ತಿಯನ್ನು ಪೊಲೀಸರು ಹುಡುಕಾಡುತ್ತಿದ್ದ ವಿಚಾರವನ್ನು ತಿಳಿದ ಆತನು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದನು.

ಇದಾದ ನಂತರ ಆತನಿಂದ ಹಣ ಪಡೆದುಕೊಂಡ ವ್ಯಕ್ತಿಗಳಿಂದ ಹಣವನ್ನು ವಾಪಾಸ್ಸು ನೀಡುವಂತೆ ತಿಳಿಸಿದಾಗ ಹಣದ ವಿಚಾರದಲ್ಲಿ ಕರೆ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ನಂತರ ರೂ. 30,000/- ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದು, ಇದರಿಂದ ಹಣವನ್ನು ಸುಲಿಗೆ ಮಾಡಿದ ಆರೋಪಿಗಳ ವಿರುದ್ಧ ಹಣವನ್ನು ಕಳೆದುಕೊಂಡ ವ್ಯಕ್ತಿಯು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಾಗಿತ್ತು. ಅದರಂತೆ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಹಣವನ್ನು ಸುಲಿಗೆ ಮಾಡಿದ ಅಬ್ದುಲ್ ಖಾದರ್ ರಿಝ್ವಾನ್ (28) ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಈತನನ್ನು ವಿಚಾರಣೆ ನಡೆಸಿದಾಗ ಹಲವು ಕಂತುಗಳಲ್ಲಿ ಪ್ರಕರಣದ ದೂರುದಾರಿಂದ ಒಟ್ಟು 2,95,000/- ಹಣವನ್ನು ಸುಲಿಗೆ ಮಾಡಿರೋದು ಗೊತ್ತಾಗಿದೆ.  ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯು ಭಾಗಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ.

.

- Advertisement -
spot_img

Latest News

error: Content is protected !!