Tuesday, May 7, 2024
Homeತಾಜಾ ಸುದ್ದಿಮೂರು ವರ್ಷದ ಬಾಲಕಿ ಮೇಲೆ ಹರಿದ ಮಿನಿ ಲಾರಿ: ಸ್ಥಳದಲ್ಲಿಯೇ ಸಾವನ್ನಪ್ಪಿದ ಮಗು

ಮೂರು ವರ್ಷದ ಬಾಲಕಿ ಮೇಲೆ ಹರಿದ ಮಿನಿ ಲಾರಿ: ಸ್ಥಳದಲ್ಲಿಯೇ ಸಾವನ್ನಪ್ಪಿದ ಮಗು

spot_img
- Advertisement -
- Advertisement -

ಧಾರವಾಡ: ಮಿನಿ ಲಾರಿಯೊಂದರ ಅಡಿಗೆ ಸಿಲುಕಿ ಮೂರು ವರ್ಷದ ಬಾಲಕಿಯೊಬ್ಬಳು ಸಾವಿಗೀಡಾದ ದುರಂತ ಪ್ರಕರಣವೊಂದು ನಡೆದಿದೆ. ಧಾರವಾಡದ ಕಲ್ಯಾಣನಗರ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.


ಧಾರವಾಡ ಟೈವಾಕ್ ಕಾಲನಿ ನಿವಾಸಿ ಅನಂ ರಿಜ್ವಾನ್ ಐನಾಪೂರ (3) ಸಾವಿಗೀಡಾದ ಬಾಲಕಿ.
ಬೇರೆ ಊರಿಗೆ ಹೋಗಲು ಹೊರಟಿದ್ದ ಪಾಲಕರ ಜತೆ ಈ ಬಾಲಕಿ ನಿಂತಿದ್ದು, ಈ ವೇಳೆ ಬಂದ ಮಿನಿ ಲಾರಿ ಬಾಲಕಿಯ ಮೇಲೆ ಸಾಗಿದೆ. ಪರಿಣಾಮವಾಗಿ ಈಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.


ಈ ಅಪಘಾತ ಕಂಡ ಸ್ಥಳೀಯರು ಲಾರಿ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಲಾರಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೂಡ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!