Monday, June 8, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾತ ಅರೆಸ್ಟ್

ಉಪ್ಪಿನಂಗಡಿ; ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾತ ಅರೆಸ್ಟ್

- Advertisement -
- Advertisement -

ಉಪ್ಪಿನಂಗಡಿ; ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾತನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಉರುವಾಲು ಗ್ರಾಮದ ಕುಪ್ಪೆಟ್ಟಿಯಲ್ಲಿ ನಡೆದಿದೆ. ಜಯಂತ ಗೌಡ ಬಂಧಿತ ವಾಹನ ಚಾಲಕ.

ಆರೋಪಿ ಮಿನಿ ಗೂಡ್ಸ್ ವಾಹನದಲ್ಲಿ ಅಮವಾಗಿ ಸಾಗಿಸುತ್ತಿದ್ದ ಒಂದು ದನ, ಮೂರು ಕರುಗಳು ಸೇರಿ ನಾಲ್ಕು ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಜಯಂತ ಗೌಡ ಕುಪ್ಪೆಟ್ಟಿಯ ಬದ್ರುದ್ದೀನ್ ಯಾನೆ ಬದ್ರು ಎಂಬಾತನಿಗೆ ಗೋ ಸಾಗಾಟಕ್ಕೆ ಸಹಕರಿಸಿದ್ದು, ತನ್ನ ಎಳೆಯ ವಯಸ್ಸಿನ ಮಗುವನ್ನು ವಾಹನದಲ್ಲಿ ಕುಳ್ಳಿರಿಸಿ ಜಾನುವಾರುಗಳನ್ನು ತುಂಬಿ ವಾಹನವನ್ನು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!