Wednesday, May 15, 2024
Homeಕರಾವಳಿಕಾಸರಗೋಡುಆನ್ ಲೈನ್ ತರಗತಿಗೆ ಸ್ಮಾರ್ಟ್ ಪೋನ್ ಇಲ್ಲವೆಂದು ಮನನೊಂದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಆನ್ ಲೈನ್ ತರಗತಿಗೆ ಸ್ಮಾರ್ಟ್ ಪೋನ್ ಇಲ್ಲವೆಂದು ಮನನೊಂದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

spot_img
- Advertisement -
- Advertisement -

ಮಲಪ್ಪುರಂ: ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲದ ಕಾರಣ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಾಲಂಚೇರಿ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ವೀಲಾಚೆರಿ ಬಳಿಯ ಮಂಗೇರಿ ನಿವಾಸಿ ಬಾಲಕೃಷ್ಣನ್ ಮತ್ತು ಶೀಬಾ ಅವರ ಪುತ್ರಿ ದೇವಿಕಾ (14) ಎಂದು ಗುರುತಿಸಲಾಗಿದೆ.

ಈಕೆ ಇರಿಂಬಿಳಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಆನ್ಲೈನ್ ತರಗತಿಗಳಿಗೆ ಹಾಜರಾಗಲು ತಮ್ಮ ಮನೆಯಲ್ಲಿ ಸೌಲಭ್ಯಗಳಿಲ್ಲದ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.

ಎಬಿವಿಪಿಯಿಂದ ಪ್ರತಿಭಟನೆ
ಶಿಕ್ಷಣ ಕ್ಷೆತ್ರದಲ್ಲಿ ನಂಬರ್ ಒನ್ ಎಂದು ಬೀಗುತ್ತಿದ್ದ ಕೇರಳ ರಾಜ್ಯದಲ್ಲಿ ಆನ್ಲೈನ್ ಶಿಕ್ಷಣ ಕೂಪಕ್ಕೆ ದಲಿತ ವಿದ್ಯಾರ್ಥಿಯೊಬ್ಬಳು ಬಲಿಯಾಗಿರುವುದು ಖೇದಕರ. ಈ ಬಗ್ಗೆ ಎಬಿವಿಪಿ ವಿಧ್ಯಾರ್ಥಿ ಪರಿಷತ್ ನಿಂದ ರಾಜ್ಯದೆಲ್ಲೆಡೆ ಪ್ರತಿಭಟಿಸುತಿದೆ ಎಂದು ರಾಜ್ಯ ಎಬಿವಿಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -
spot_img

Latest News

error: Content is protected !!