Monday, April 29, 2024
Homeಕರಾವಳಿಮಳಲಿ‌ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುದೀರ್ಘ ವಿಚಾರಣೆ : ಜಾಗದ ಸರ್ವೇ ಮಾಡಲು ವಿ.ಹೆಚ್.ಪಿ...

ಮಳಲಿ‌ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುದೀರ್ಘ ವಿಚಾರಣೆ : ಜಾಗದ ಸರ್ವೇ ಮಾಡಲು ವಿ.ಹೆಚ್.ಪಿ ಪರ ವಕೀಲ ಚಿದಾನಂದ ಕೆದಿಲಾಯ ಮನವಿ

spot_img
- Advertisement -
- Advertisement -

ಮಂಗಳೂರು: ಮಳಲಿ‌ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು  ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸುದೀರ್ಘ ವಿಚಾರಣೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಂಡಿಸಿದರು.

ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿ ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಗೆ ಬರುವುದಿಲ್ಲ. ನಾವು ಎಲ್ಲೂ ಅದು ವಕ್ಫ್ ಆಸ್ತಿಯೋ ಅಲ್ಲವೋ ಎಂಬ ಬಗ್ಗೆ ಪ್ರಶ್ನಿಸಿಲ್ಲ. ನಮ್ಮ ಅರ್ಜಿದಾರರು ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇವಸ್ಥಾನ ಅಂತ ಹೇಳಿದ್ದಾರೆ. ಹೀಗಾಗಿ ಅದರ ಸಂರಕ್ಷಣೆ ಮಾಡುವಂತೆ ಅರ್ಜಿಯಲ್ಲಿ ಕೇಳಿದ್ದಾರೆ. ಅದು ಐತಿಹಾಸಿಕ ಸ್ಮಾರಕವೋ ಮಸೀದಿಯೋ ಅನ್ನೋದನ್ನ ವಕ್ಫ್ ಟ್ರಿಬ್ಯುನಲ್ ನಿರ್ಧರಿಸಲು ಆಗುವುದಿಲ್ಲ. ಹೀಗಾಗಿ ಅದನ್ನ ಸಿವಿಲ್ ಕೋರ್ಟ್ ತಕ್ಷಣ ನಿರ್ಧರಿಸಬೇಕು. ಹೀಗಾಗಿ ಸರ್ವೆ ಮಾಡಿದರೆ ಅಲ್ಲಿನ ಸ್ಮಾರಕ ಏನು ಅನ್ನುವುದು ಗೊತ್ತಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ವಕ್ಫ್ ಟ್ರಿಬ್ಯೂನಲ್ ವ್ಯಾಪ್ತಿಗೆ ಈ ಅರ್ಜಿ ಬರುವುದಿಲ್ಲ. 1991ರ ಪೂಜಾ ಸ್ಥಳ ಕಾಯ್ದೆಯಡಿಯೂ ಅರ್ಜಿ ವಜಾ ಮಾಡಲು ಆಗುವುದಿಲ್ಲ. ಪೂಜಾ ಸ್ಥಳ ಕಾಯಿದೆಯಲ್ಲೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಹೇಳಲಾಗಿದೆ. ಯಾವುದೇ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಉಲ್ಲೇಖ ಇದೆ. ಹೀಗಿರುವಾಗ ನಮ್ಮ ಅರ್ಜಿದಾರರ ವಾದದಂತೆ‌ ಅಲ್ಲಿರುವ ಸ್ಮಾರಕ ಏನು ಅಂತ ಗೊತ್ತಾಗಬೇಕು. ಅದು ಸರ್ವೇ ಮೂಲಕ ಗೊತ್ತಾದರೆ ಅದನ್ನ ಸಂರಕ್ಷಣೆ ಮಾಡಲು ಸಾಧ್ಯ. ಈಗ ಇರುವ ತಡೆಯಾಜ್ಞೆ ತೆರವು ಮಾಡಿದರೆ ಅಲ್ಲಿ ಮಸೀದಿ ನಿರ್ಮಾಣ ಆಗುತ್ತದೆ. ಇದರಿಂದ ಐತಿಹಾಸಿಕ ಸ್ಮಾರಕವೊಂದರ ಸಂರಕ್ಷಣೆ ಅಸಾಧ್ಯ ಎಂದು ವಕೀಲ‌ ಚಿದಾನಂದ ಕೆದಿಲಾಯ ಸುದೀರ್ಘ ವಾದ ಮಂಡನೆ ಮಾಡಿದರು.

- Advertisement -
spot_img

Latest News

error: Content is protected !!