Thursday, May 16, 2024
Homeಅಪರಾಧದೆಹಲಿಯಲ್ಲಿ ಅರ್ಧಬೆಲೆಗೆ ಸಿಗ್ತಿದೆ ಮದ್ಯ; ಕಳ್ಳಸಾಗಾಟ ಮಾಡುತ್ತಿದ್ದ 70ಕ್ಕೂ ಅಧಿಕ ಮಂದಿಯ ಬಂಧನ

ದೆಹಲಿಯಲ್ಲಿ ಅರ್ಧಬೆಲೆಗೆ ಸಿಗ್ತಿದೆ ಮದ್ಯ; ಕಳ್ಳಸಾಗಾಟ ಮಾಡುತ್ತಿದ್ದ 70ಕ್ಕೂ ಅಧಿಕ ಮಂದಿಯ ಬಂಧನ

spot_img
- Advertisement -
- Advertisement -

ನವದೆಹಲಿ: ಮದ್ಯ ಅರ್ಧ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಳ್ಳಸಾಗಾಟ ಆರಂಭವಾಗಿದ್ದಷ್ಟೇ ಅಲ್ಲದೆ, ಇನ್ನೊಂದು ರಾಜ್ಯದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದ ಪ್ರಸಂಗ ಉಂಟಾಗಿದೆ.


ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು 70ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.
ಅರ್ಧದಷ್ಟು ಕಡಿಮೆ ಬೆಲೆಗೆ ಮದ್ಯ ಸಿಗುತ್ತಿದೆ ಎಂಬ ಕಾರಣಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಉತ್ತರಪ್ರದೇಶಕ್ಕೆ ಮದ್ಯ ಕಳ್ಳಸಾಗಾಟ ಆರಂಭವಾಗಿದ್ದು, ಸಂಬಂಧಿತ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.

2021ರ ನವೆಂಬರ್‌ನಿಂದ ಜಾರಿಗೆ ದೆಹಲಿಯಲ್ಲಿ ಜಾರಿಗೆ ಬಂದಿರುವ ನೂತನ ಮದ್ಯನೀತಿಯಿಂದಾಗಿ ಅಲ್ಲಿ ಉತ್ತರಪ್ರದೇಶಕ್ಕಿಂತಲೂ ಅರ್ಧದಷ್ಟು ಕಡಿಮೆ ಬೆಲೆಗೆ ಮದ್ಯ ಸಿಗಲಾರಂಭಿಸಿದೆ.

ಇದೇ ಕಾರಣಕ್ಕೆ ಉತ್ತರಪ್ರದೇಶಕ್ಕೆ ಮದ್ಯ ಕಳ್ಳಸಾಗಣೆ ಆರಂಭವಾಗಿದ್ದು, ಯುಪಿಯ ಅಂಗಡಿಗಳಲ್ಲಿನ ಮದ್ಯ ಮಾರಾಟದಲ್ಲಿ ಶೇ. 40 ಇಳಿಕೆ ಆಗಿತ್ತು. ಅಷ್ಟೇ ಅಲ್ಲದೆ ರಾಜ್ಯದ ಆರ್ಥಿಕತೆ ಮೇಲೂ ಪರಿಣಾಮ ಬೀರಿತ್ತು.
ಹೀಗಾಗಿ ಗಡಿಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿರುವ ಅಬಕಾರಿ ಅಧಿಕಾರಿಗಳು ಈ ವರ್ಷದ ಏ. 1ರಿಂದ ಜೂ. 7ರವರೆಗೆ 70ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಜತೆಗೆ 10,056 ಲೀಟರ್ ಆಸ್ಕೋಹಾಲ್ ಮತ್ತು 23 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.


ವಾಹನಗಳ ಪೈಕಿ ಬಹುತೇಕವು ದ್ವಿಚಕ್ರವಾಹನಗಳಾಗಿದ್ದು, ಉಳಿದವು ಖಾಸಗಿ ಕಾರುಗಳು. ಇನ್ನು 2021-22ರಲ್ಲಿ 173 ಮಂದಿಯನ್ನು ಬಂಧಿಸಲಾಗಿದ್ದು, 27 ಸಾವಿರ ಲೀಟರ್ ಮದ್ಯ ಹಾಗೂ 28 ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಕಳ್ಳಸಾಗಣೆ ತಡೆ ಕಾರ್ಯಾಚರಣೆ ಆರಂಭಿಸಿದ ಬಳಿಕ ರಾಜ್ಯದ ಆದಾಯದಲ್ಲಿ ಶೇ. 5 ಏರಿಕೆ ಕೂಡ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!