Friday, June 5, 2026
Homeಅಪರಾಧವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ; ಅಂದಾಜು 1.5 ಲಕ್ಷ ರೂ. ಹಣವನ್ನು...

ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ; ಅಂದಾಜು 1.5 ಲಕ್ಷ ರೂ. ಹಣವನ್ನು ದೋಚಿದ ಕಳ್ಳರು

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆಯಲ್ಲಿ ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿಹಾಕಿ ದರೋಡೆ ಮಾಡಿರುವ ಘಟನೆ ನಡೆದಿದೆ.

ಮಾಲ್ದಾರೆಯ(ಬಾಡಗ) ತಂಗಪ್ಪಣ್ಣ ಹಾಗೂ ಜಾನಕಿ ದಂಪತಿಯ ಮನೆಗೆ 3 ಮಂದಿ ಮುಸುಕುಧಾರಿಗಳು ದಾಳಿ ಮಾಡಿದ್ದು, ಮನೆಯ ಹಿಂಬದಿಯ ಬಾಗಿಲು ಮೂಲಕ ದರೋಡೆಕೋರರು ಒಳಗೆ ಪ್ರವೇಶಿಸಿದ್ದಾರೆ. ದರೋಡೆಕೋರರು, ಚಿನ್ನ ಹಾಗೂ ನಗದು ಎಲ್ಲಿಟ್ಟಿದ್ದೀರಿ ಎಂದು ಬೆದರಿಸಿ ದಂಪತಿಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿದ್ದರು ಎನ್ನಲಾಗಿದೆ.

ದರೋಡೆಕೋರರು ಮನೆಯಲ್ಲಿದ್ದ ಅಂದಾಜು 1.5 ಲಕ್ಷ ರೂ. ಹಣವನ್ನು ದೋಚಿದ್ದು, ಕೊನೆಯಲ್ಲಿ ಜಾನಕಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದಾಡಿದ್ದಾರೆ. ಇದರ ಪರಿಣಾಮವಾಗಿ ಅರ್ಧ ಭಾಗ ಸರ ದರೋಡೆಕೋರರ ಕೈಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನಾ ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್, ಸಿ.ಐ ವೆಂಕಟೇಶ್, ಪಿ.ಎಸ್.ಐ ಮೋಹನ್ ರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಘಟನೆಯ ಕುತರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

- Advertisement -

Latest News

error: Content is protected !!