Thursday, June 4, 2026
Homeಕರಾವಳಿಮಳಲಿ ಮಸೀದಿ ವಿವಾದ ಪ್ರಕರಣ : . ವಿವಾದದ ಕುರಿತು ಪರಿಶೀಲನೆಗೆ ಕಮಿಷನರ್ ನೇಮಕ ಮಾಡಲು...

ಮಳಲಿ ಮಸೀದಿ ವಿವಾದ ಪ್ರಕರಣ : . ವಿವಾದದ ಕುರಿತು ಪರಿಶೀಲನೆಗೆ ಕಮಿಷನರ್ ನೇಮಕ ಮಾಡಲು ಹೈಕೋರ್ಟ್ ಗೆ ಮನವಿ

- Advertisement -
- Advertisement -

ಮಂಗಳೂರು: ಮಳಲಿ ಮಸೀದಿ ವಿವಾದದ ಕುರಿತು ಪರಿಶೀಲನೆಗೆ ಕಮಿಷನರ್ ನ್ನು ನೇಮಕ ಮಾಡಬೇಕು ಎಂದು ವಕೀಲ ವಿವೇಕ್ ಸುಬ್ಬಾರೆಡ್ಡಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ‌.

ಮಂಗಳೂರಿನ ತೆಂಕ ಎಡಪಾಡಿಯ ಧನಂಜಯ್ ಹಾಗೂ ಬಡಗು ಎಡಪಾಡಿಯ ಮನೋಜ್ ಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದೆ.

ಅರ್ಜಿದಾರರ ಪರ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದ್ದು, ಮಸೀದಿಯ ಒಳಗೆ ದೇವಾಲಯವಿತ್ತೋ, ಇಲ್ಲವೋ ಎಂಬ ಬಗ್ಗೆ ಸ್ಥಳ ಸಮೀಕ್ಷೆ ನಡೆಸಿಯೇ ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ. ಇದನ್ನು ಪಕ್ಷಗಾರರು ಅಥವಾ ಬೇರೆಯವರು ಮಾಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ತಂತ್ರಜ್ಞಾನದ ಮೂಲಕ ಮಾತ್ರ ಮಾಡಲು ಸಾಧ್ಯ. ಆದ್ದರಿಂದ, ಮಸೀದಿಯ ಪರಿಶೀಲನೆಗೆ ಕಮಿಷನರ್ ನೇಮಿಸಬೇಕೆಂದು‌ ಹೈಕೋರ್ಟ್ ಗೆ ಆಗ್ರಹಿಸಿದ್ದಾರೆ.

ಇದೀಗ ಮಂಗಳೂರು ನ್ಯಾಯಾಲಯದಲ್ಲಿ ಮಳಲಿ ಮಸೀದಿ ಕುರಿತ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ವಿಚಾರಣೆ ಮಾತ್ರ ಮಾಡಬೇಕು. ಯಾವುದೇ ತೀರ್ಪು ನೀಡಬಾರದೆಂದು‌ ಕೆಳಹಂತದ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು

- Advertisement -

Latest News

error: Content is protected !!