ಬೆಳ್ತಂಗಡಿ;ಮೈತ್ರಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ ಉಜಿರೆ ಇವರ ಆಶ್ರಯದಲ್ಲಿ ದಿನಾಂಕ 24/09/2023 ರಂದು ಸ.ಹಿ.ಪ್ರಾ.ಶಾಲೆ ಗಾಂಧಿನಗರ ಮೈದಾನದಲ್ಲಿ ನಡೆದ ಗಣೇಶೋತ್ಸವ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಯ ಉದ್ಘಾಟನೆಯನ್ನು ಶ್ರೀಮತಿ ತ್ರಿವೇಣಿ ( ಮುಖ್ಯೋಪಾಧ್ಯಾಯ ಸರಕಾರಿ ಪ್ರೌಢಶಾಲೆ ಹಳೆಪೇಟೆ ಉಜಿರೆ) ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಆಸೀಪ್ ಮೈತ್ರಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ ಇದರ ಅಧ್ಯಕ್ಷರಾದ ಶ್ರೀ ರವಿ.ಜೆ . ಮತ್ತು ಊರಿನವರಾದ ದೂಜ . ಮೈತ್ರಿ ಫ್ರೆಂಡ್ಸ್ ಕ್ಲಬ್ ಇದರ ಗೌರವಾಧ್ಯಕ್ಷರಾದ ಶ್ರೀ ಕೆ.ಶ್ರೀನಿವಾಸ ಶಾರೀರಿಕ ಶಿಕ್ಷಕರಾದ ಸಂಜೀವ.ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಹಾಗೂ ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನೂತನವಾಗಿ ರಚನೆಯಾದ ಮೈತ್ರಿ ಮಹಿಳಾ ಮಂಡಳಿಯ ಉದ್ಘಾಟನೆಯನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಕಿರಣ್ ನೇರವೇರಿಸಿದರು .ಸಮಾರೋಪ ಸಮಾರಂಭ ಅಧ್ಯಕ್ಷರಾಗಿ ಶ್ರೀ ಶೇಖರ್ ಕುಕ್ಕೇಡಿ, ಮುಖ್ಯ ಅತಿಥಿಗಳಾಗಿ ಕೆ.ಎಮ್ ನಾಗೇಶ್ ಕುಮಾರ್ ಗೌಡ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ, ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅನಿಲ್ ಪ್ರಕಾಶ್ ಡಿ’ಸೋಜಾ. ಮೈತ್ರಿ ಮಹಿಳಾ ಮಂಡಳದ ನೂತನ ಅಧ್ಯಕ್ಷರಾದ ಶ್ರೀಮತಿ ಗೀತಾ. ಗೌರವಾಧ್ಯಕ್ಷರಾದ ಜಾನೇಟ್ ಮೊರಾಸ್ . ಮೈತ್ರಿ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀ ರವಿ.ಜೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ದಿನೇಶ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಊರಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು ಅದಲ್ಲದೆ ವಿಶೇಷ ಉಜಿರೆ ಮೆಸ್ಕಾಂ ನ ಲೈನ್ ಮ್ಯಾನ್ ಆದ ಶ್ರೀಕಾಂತ್ ಕಾಗನಿಲ್ . ಊರಿನ ಪಂಪುಚಾಲಕರಾದ ಗೋಪಾಲ ಕುಲಾಲ್. ಎನ್.ಎಸ್.ಎಸ್ ವಿಧ್ಯಾರ್ಥಿ ನಿಶ್ವಾನ್ . ಹಾಗೂ ಕರಾಟೆಯಲ್ಲಿ ವಿಶೇಷ ಸಾಧನೆ ಮಾಡಿದ ಮಹಮ್ಮದ್ ರಯ್ಯಾನ್ .ಇವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು