Saturday, May 18, 2024
Homeತಾಜಾ ಸುದ್ದಿಚೀನಾಕ್ಕೆ ಗುದ್ದು: 5,000 ಕೋಟಿ ಮೌಲ್ಯದ ಚೀನಾದ 3 ಒಪ್ಪಂದಗಳಿಗೆ ತಡೆ ನೀಡಿದ ಮಹಾ ಸರ್ಕಾರ

ಚೀನಾಕ್ಕೆ ಗುದ್ದು: 5,000 ಕೋಟಿ ಮೌಲ್ಯದ ಚೀನಾದ 3 ಒಪ್ಪಂದಗಳಿಗೆ ತಡೆ ನೀಡಿದ ಮಹಾ ಸರ್ಕಾರ

spot_img
- Advertisement -
- Advertisement -

ಮುಂಬೈ: ಲಡಾಖ್ ನ ಗಾಲ್ವಾರ್ ಕಣಿವೆ ಸಂಘರ್ಷದ ಹಿನ್ನೆಲೆಯಲ್ಲಿ ಇದೇಗ ಇತ್ತೀಚೆಗೆ ಮುಕ್ತಾಯಗೊಂಡ ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ಹೂಡಿಕೆದಾರರ ಸಭೆಯಲ್ಲಿ ಚೀನಾದ ಕಂಪನಿಗಳೊಂದಿಗೆ ಸಹಿ ಹಾಕಿದ ಮೂರು ಪ್ರಮುಖ ಒಪ್ಪಂದಗಳನ್ನು ಮಹಾರಾಷ್ಟ್ರ ಸರ್ಕಾರ ತಡೆ ಹಿಡಿದಿದೆ.

ಮಹಾರಾಷ್ಟ್ರ ಸರ್ಕಾರ ಚೀನಾದ ಸಂಸ್ಥೆಗಳ ಜೊತೆ ಮಾಡಿಕೊಂಡಿದ್ದ ಸುಮಾರು 5000 ಕೋಟಿಯ ಮೂರು ಒಪ್ಪಂದಗಳಿಗೆ ತಡೆ ನೀಡಿದೆ. ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ತಿಳಿಸಿದ್ದಾರೆ. ಚೀನಾದ ಸಂಸ್ಥೆಗಳೊಂದಿಗೆ ಮುಂದಿನ ದಿನಗಳಲ್ಲಿ ಯಾವುದೇ ಒಡಂಬಡಿಕೆ ಮಾಡಿಕೊಳ್ಳಬೇಡಿ ಎಂದು ವಿದೇಶಾಂಗ ಸಚಿವಾಲಯ ಸಲಹೆ ನೀಡಿರುವುದಾಗಿಯೂ ಸಚಿವರು ತಿಳಿಸಿದ್ದಾರೆ.

ಕರೊನಾ ಬಿಕ್ಕಟ್ಟಿನ ನಂತರ, ಆರ್ಥಿಕ ಪುನಶ್ಚೇತನಕ್ಕಾಗಿ ಮಹಾರಾಷ್ಟ್ರ ಸರ್ಕಾರವು ಮ್ಯಾಗ್ನೇಟಿಕ್‌ ಮಹಾರಾಷ್ಟ್ರ 2.0 ಅಭಿಯಾನ ಆರಂಭಿಸಿತ್ತು. ಇದರ ಅಡಿಯಲ್ಲಿ ಚೀನಾದ ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್‌ ಜೆವಿ, ಹೆಂಗ್ಲಿ ಇಂಜಿನಿಯರಿಂಗ್‌ ಮತ್ತು ಫೋಟಾನ್‌, ಗ್ರೇಟ್‌ ಮೋಟಾರ್‌ನೊಂದಿಗೆ ಜೂ.17ರಂದು ಪುಣೆಯ ತಲೆಗಾಂವ್‌ನಲ್ಲಿ ಹೂಡಿಕೆ ಸಂಬಂಧ ಮೂರು ಒಪ್ಪಂದಗಳನ್ನ ಮಾಡಿಕೊಂಡಿತ್ತು. ಇದು ಭಾರಿ ಟೀಕೆಗೆ ಒಳಗಾಗಿತ್ತು.

- Advertisement -
spot_img

Latest News

error: Content is protected !!