- Advertisement -
![]()
- Advertisement -
ಬೆಳ್ತಂಗಡಿ: ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಸಲ್ಲಿಕೆಯ ಹಿನ್ನೆಲೆಯಲ್ಲಿ ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯತ್ ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಸವ ವಸತಿ ಯೋಜನೆ ಹಾಗೂ 94ಸಿ ಯಲ್ಲಿ ಅಕ್ರಮ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ACB ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ ನೇತ್ರತ್ವದಲ್ಲಿ ನಡೆದ ದಾಳಿಯಲ್ಲಿ ಹೆಡ್ ಕ್ವಾಡ್ ಟೇಬಲ್ ಹರಿಪ್ರಸಾದ್, ಪ್ರಶಾಂತ್ ಪಾಲ್ಗೊಂಡಿದ್ದರು.
ಒಂದೇ ಕುಟುಂಬದ ಮೂವರಿಗೆ ಬಸವ ವಸತಿ ಯೋಜನೆ ಹಾಗೂ 94.ಸಿ ಯಲ್ಲಿ ಸರಕಾರದ ಯೋಜನೆಯಲ್ಲಿ ಮನೆಳನ್ನು ನೀಡುವ ಮೂಲಕ ತಾತ್ಕಾಲಿಕ ಡಾಟಾ ಎಂಟ್ರಿ ಮಾಡುವ ನೌಕರ ರಮೇಶ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಗಳು ಬಂದಿದ್ದು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಿಸಲಾಗುತ್ತಿದೆ
- Advertisement -


