Saturday, May 18, 2024
Homeತಾಜಾ ಸುದ್ದಿಮುಂಬೈ: ಕೊರೊನಾ ಪರೀಕ್ಷಾ ಶುಲ್ಕ ಇಳಿಕೆ ಮಾಡಿದ 'ಮಹಾ' ಸರ್ಕಾರ

ಮುಂಬೈ: ಕೊರೊನಾ ಪರೀಕ್ಷಾ ಶುಲ್ಕ ಇಳಿಕೆ ಮಾಡಿದ 'ಮಹಾ' ಸರ್ಕಾರ

spot_img
- Advertisement -
- Advertisement -

ಮುಂಬೈ: ಕೊರೊನಾ ಸೋಂಕಿತರಿಗೆ ಮಹಾರಾಷ್ಟ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್-19 ಪರೀಕ್ಷೆಗೆ ನಿಗದಿ ಮಾಡಲಾಗಿದ್ದ ಬೆಲೆ ಇಳಿಕೆ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಅಧಿಕೃತ ಮಾಹಿತಿ ನೀಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ, ಇಲ್ಲಿಯತನಕ ಕೋವಿಡ್​​-19 ಚಿಕಿತ್ಸೆಗೆ ಲ್ಯಾಬ್​​ನಲ್ಲಿ 4,400 ರೂ. ತೆಗೆದುಕೊಳ್ಳಲಾಗುತ್ತಿತ್ತು. ಇನ್ಮುಂದೆ ಕೇವಲ 2,200 ರೂ.ಗೆ ಕೊರೋನಾ ಪರೀಕ್ಷೆ ಮಾಡಲಾಗುವುದು ಎಂದರು.

ಆರಂಭದಲ್ಲಿ ಕೊವಿಡ್ ಪರೀಕ್ಷೆ ಶುಲ್ಕ 5200 ರೂಪಾಯಿ ಇತ್ತು. ಅದನ್ನು ಕಡಿಮೆ ಮಾಡಿ 4400 ರೂಪಾಯಿ ಕೊರೊನಾ ಪರೀಕ್ಷೆ ಮಾಡಲಾಯಿತು. ಈಗ ಮತ್ತೊಮ್ಮೆ ಬೆಲೆ ಇಳಿಕೆ ಮಾಡಲಾಗಿದೆ.

ಕೊವಿಡ್-19 ಪರೀಕ್ಷೆಗಾಗಿ ಪ್ರಸ್ತುತ ರಾಜ್ಯದಲ್ಲಿ 91 ಲ್ಯಾಬ್‌ಗಳಿವೆ ಮತ್ತು ಸುಮಾರು ನಾಲ್ಕರಿಂದ ಐದು ಪ್ರಯೋಗಾಲಯಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದ್ದಾರೆ. ಅಂದ್ಹಾಗೆ, ಖಾಸಗಿ ಲ್ಯಾಬ್‌ಗಳಲ್ಲಿ ಬೆಲೆ ನಿಗದಿ ಮಾಡಲು ಸರ್ಕಾರದ ಕಡೆಯಿಂದ ಸಮಿತಿಯೊಂದನ್ನು ರಚಿಸಿ ವರದಿ ಪಡೆದುಕೊಂಡಿದೆ. ಆ ಬಳಿಕವಷ್ಟೇ 2200 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

- Advertisement -
spot_img

Latest News

error: Content is protected !!