Thursday, June 25, 2026
Homeಕರಾವಳಿಬೆಳ್ತಂಗಡಿ : ಮಹಾಎಕ್ಸ್ ಪ್ರೆಸ್ ವರದಿ ಫಲಶೃತಿ; ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಹೋಗುವ...

ಬೆಳ್ತಂಗಡಿ : ಮಹಾಎಕ್ಸ್ ಪ್ರೆಸ್ ವರದಿ ಫಲಶೃತಿ; ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಹಾಕಿದ್ದ ಬೇಲಿ ತೆರವು

- Advertisement -
- Advertisement -

ಬೆಳ್ತಂಗಡಿ : ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಹೋಗಲು ಕಳೆದ 30 ವರ್ಷಗಳಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿದ್ದರು. ಈ ಬಗ್ಗೆ ನಿಮ್ಮ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಪ್ರಸಾರ ಮಾಡಿತ್ತ. ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಪೊಲೀಸರು ಹಾಗೂ ಗ್ರಾಮ ಪಂಚಾಯತ್ ನವರ ಸಮ್ಮುಖದಲ್ಲಿ ಬೇಲಿ ತೆರವುಗೊಳಿಸಲಾಗಿದೆ

ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಎ.3 ರಿಂದ ಎ.7 ರವರೆಗೆ ಬ್ರಹ್ಮಕಲಶೋತ್ಸವ ನಿಗದಿಯಾಗಿದ್ದು ಇದಕ್ಕೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ನಿಂದ ರಸ್ತೆ ಸರಿಪಡಿಸುವ ಕಾರ್ಯವನ್ನು ಎ.2 ರಂದು ಜೆಸಿಬಿ ಮೂಲಕ ಆರಂಭಿಸಿದ್ದು ಇದಕ್ಕೆ ಏಕಾಏಕಿ ಖಾಸಗಿ ವ್ಯಕ್ತಿ ನುಗ್ಗಿ ಜೆಸಿಬಿಗೆ ಅಡ್ಡನಿಂತು ಕೆಲ ಸ್ಥಳೀಯರನ್ನು ಉಪಯೋಗಿಸಿ ಜೆಸಿಬಿಯನ್ನು ವಾಪಸ್ ಕಳುಹಿಸಿ ನಂತರ ಬೇಲಿ ಹಾಕಲಾಗಿತ್ತು. ಇದಕ್ಕೆ ಭಕ್ತರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವರದಿ ಕೂಡ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಬೇಲಿಯನ್ನು ತೆರವುಗೊಳಿಸಲಾಗಿದೆ.

- Advertisement -

Latest News

error: Content is protected !!