Tuesday, May 7, 2024
Homeಕೊಡಗುಕೊಡಗು: ಮಡಿಕೇರಿಯಲ್ಲಿ 50 ಕಡೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣ; ಇಬ್ಬರು ಆರೋಪಿಗಳಿಗೆ ಷರತ್ತುಬದ್ದ ಜಾಮೀನು

ಕೊಡಗು: ಮಡಿಕೇರಿಯಲ್ಲಿ 50 ಕಡೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣ; ಇಬ್ಬರು ಆರೋಪಿಗಳಿಗೆ ಷರತ್ತುಬದ್ದ ಜಾಮೀನು

spot_img
- Advertisement -
- Advertisement -

ಕೊಡಗು: ಮಡಿಕೇರಿಯಲ್ಲಿ 50 ಕಡೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ.ಮಡಿಕೇರಿ ನಗರಸಭಾ ಸದಸ್ಯ ಜೆಡಿಎಸ್‌ನ ಮುಸ್ತಾಫ, ರಿಯಲ್‌ ಎಸ್ಟೇಟ್ ಉದ್ಯಮಿ ಅಬ್ದುಲ್ಲಾಗೆ ಮಡಿಕೇರಿ ಜೆಎಂಎಫ್ ಸಿ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಮಡಿಕೇರಿಯಲ್ಲಿ 50 ಕಡೆ ಪೆಟ್ರೋಲ್ ಬಾಂಬ್ ಹಾಕುವ ಆಡಿಯೋ ವೈರಲ್​ ಆಗಿದ್ದು, ಮಲಯಾಳಿ ಭಾಷೆಯಲ್ಲಿ ಮಾತನಾಡಿರುವ ಆರೋಪ ಮಾಡಲಾಗಿದೆ. ಮಡಿಕೇರಿ ನಗರಸಭಾ ಸದಸ್ಯ ಜೆಡಿಎಸ್‌ನ ಮುಸ್ತಾಫ, ರಿಯಲ್‌ ಎಸ್ಟೇಟ್ ಉದ್ಯಮಿ ಅಬ್ದುಲ್ಲಾ ನನ್ನು ಬಂ‍ಧಿಸಲಾಗಿದೆ. ಈ ಬಗ್ಗೆ ಪೆನ್ಷನ್‌ಲೈನ್‌ ನಿವಾಸಿ ಶೇಷಪ್ಪ ರೈ ದೂರು ನೀಡಿದ್ದರು.

ಮಡಿಕೇರಿಯಲ್ಲಿ 50 ಕಡೆ ಪೆಟ್ರೊಲ್ ಬಾಂಬ್ ಹಾಕಿ ಭೀತಿ ಸೃಷ್ಟಿ ಯತ್ನಿಸಲಾಗಿದ್ದು, ಇಡೀ ಮಡಿಕೇರಿ ಪಟ್ಟಣವನ್ನೇ ಹೊತ್ತಿ ಉರಿಸಬೇಕು, ಇದಕ್ಕೆ 50 ಸಾವಿರದಿಂದ 1 ಲಕ್ಷ ಹಾಕಬೇಕು ಎಂಬ ಸಂಭಾಷಣೆ ಆರೋಪ ಕೇಳಿ ಬಂದಿದೆ.

ಕಳೆದ ಆರು ತಿಂಗಳ ಹಿಂದೆ ಏಪ್ರಿಲ್ 25 ರಂದು ಮಡಿಕೇರಿ ನಗರ ಸಭೆ ಸದಸ್ಯ ಜೆಡಿಎಸ್‍ನ ಮುಸ್ತಫಾ ಎಂಬುವರು ಆತನ ಸ್ನೇಹಿತ ಬೆಟ್ಟಗೇರಿಯ ಅಬ್ದುಲ್ಲಾ ಎಂಬುವರೊಂದಿಗೆ ಮಡಿಕೇರಿ ನಗರಕ್ಕೆ ಬಾಂಬ್ ಹಾಕಬೇಕು. ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು. ನಮ್ಮವರು ಒಂದಷ್ಟು ಜನರು ಸತ್ತರೂ ಪರವಾಗಿಲ್ಲ ಎಂದು ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು, ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ. 50ಕ್ಕೂ ಹೆಚ್ಚು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಮಲೆಯಾಳಂ ಭಾಷೆಯಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಈ ಹಿನ್ನೆಲೆ ಮಡಿಕೇರಿ ನಗರ ಠಾಣೆಗೆ ಶೇಷಪ್ಪ ರೈ ದೂರು ನೀಡಿದ್ದರು. ಈ ಸಂಬಂಧ ಇಬ್ಬರನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು 6 ತಿಂಗಳ ಹಿಂದಿನ ಆಡಿಯೋ ವೈರಲ್​​​ ಆಗಿದೆ.

- Advertisement -
spot_img

Latest News

error: Content is protected !!