Wednesday, June 3, 2026
Homeತಾಜಾ ಸುದ್ದಿಆನ್ ಲೈನ್ ಗೇಮಿಂಗ್ ಪೆಡಂಭೂತ!…ವಿರಾಟ್ ಕೊಹ್ಲಿ,ನಟಿ ತಮನ್ನಾಸೇರಿ ಹಲವರಿಗೆ ನೋಟಿಸ್

ಆನ್ ಲೈನ್ ಗೇಮಿಂಗ್ ಪೆಡಂಭೂತ!…ವಿರಾಟ್ ಕೊಹ್ಲಿ,ನಟಿ ತಮನ್ನಾಸೇರಿ ಹಲವರಿಗೆ ನೋಟಿಸ್

- Advertisement -
- Advertisement -

ಮಧುರೈ:ಆನ್ ಲೈನ್ ಗೇಮಿಂಗ್ ಗಳು ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಹಲವು ಯುವಕರು ಈ ಆಟಗಳಲ್ಲಿ ತೊಡಗಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಇಂತಹ ಜಾಹೀರಾತಿನಲ್ಲಿ ತೊಡಗಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ, ನಟಿ ತಮನ್ನಾ ಹಾಗೂ ರಾಣಾ ದಗ್ಗುಬಾಟಿಗೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ನೋಟಿಸ್ ಹೊರಡಿಸಿದೆ. ಆನ್ ಲೈನ್ ಜೂಜಾಟದ ಆಯಪ್ ಗಳನ್ನು ನಿಷೇಧಿಸುವಂತೆ ಕೋರಿ ಮಧುರೈ ನಿವಾಸಿ ಮೊಹಮ್ಮದ್ ಕೋರ್ಟ್ ಮೆಟ್ಟಿಲೇರಿದ್ದರು.

ಮಧುರೈ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜನರು ತಮ್ಮನ್ನು ಹಿಂಬಾಲಿಸುತ್ತಾರೆ ಎಂದು ತಿಳಿದಿದ್ದರೂ ಸೆಲೆಬ್ರಿಟಿಗಳು ಇಂತಹ ಆಟಗಳನ್ನು ಜಾಹಿರಾತು ಮಾಡುವುದೇಕೆ? ಎಂದು ಪ್ರಶ್ನಿಸಿ,ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ನಟಿ ತಮನ್ನಾ ಹಾಗೂ ರಾಣಾ ದಗ್ಗುಬಾಟಿಗೆ ಪೀಠ ನೋಟಿಸ್ ಹೊರಡಿಸಿದೆ.

- Advertisement -

Latest News

error: Content is protected !!