Sunday, May 19, 2024
Homeಕರಾವಳಿಮಂಗಳೂರು: ಇಂಟಾಕ್ ಮತ್ತು ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಮಧುಬನಿ ಕಲೆಯ ಕಾರ್ಯಾಗಾರ ಮತ್ತು ಕಲಾ...

ಮಂಗಳೂರು: ಇಂಟಾಕ್ ಮತ್ತು ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಮಧುಬನಿ ಕಲೆಯ ಕಾರ್ಯಾಗಾರ ಮತ್ತು ಕಲಾ ಪ್ರದರ್ಶನ

spot_img
- Advertisement -
- Advertisement -

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ಮಂಗಳೂರು ಅಧ್ಯಾಯ ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ಮಧುಬನಿ ಕಲಾವಿದ ಶ್ರವಣ್ ಕುಮಾರ್ ಪಾಸ್ವಾನ್ ಅವರಿಂದ ಎರಡು ದಿನಗಳ ಮಧುಬನಿ ಕಲಾ ಕಾರ್ಯಾಗಾರ ಮತ್ತು ಪ್ರದರ್ಶನವನ್ನು ನಗರದ ಬಲ್ಲಾಲ್‌ ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಏಪ್ರಿಲ್ 25 ಮತ್ತು 26 ಆಯೋಜಿಸಲಾಗಿತ್ತು.

ಶ್ರವಣ್ ಕುಮಾರ್ ಪಾಸ್ವಾನ್ ಮಧುಬನಿ ಶೈಲಿಯ ನಿಪುಣ ಕಲಾವಿದ. ಅವರ ಸಂಬಂಧಿ ಸಂತೋಷ್ ಕುಮಾರ್ ಪಾಸ್ವಾನ್ ಮತ್ತು ಮಗಳು ಉಜಾಲಾ ಪಾಸ್ವಾನ್ ಅವರಿಗೆ ಸಹಕರಿಸಿದರು. ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗಾಗಿ ಏಪ್ರಿಲ್ 29 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಸಂಜೆ 4.30 ರಿಂ0 ಸಂಜೆ 7 ಗಂಟೆಗೆ ತೆರೆದಿರುತ್ತದೆ.

ಕಲಾಪ್ರದರ್ಶನ ಎಪ್ರಿಲ್ 25 ಮಂಗಳವಾರದಂದು ಬೆಳಗ್ಗೆ 11 ಗಂಟೆಗೆ ಬರಹಗಾರ್ತಿ ಹಾಗೂ ಮಾನವ ಸಂಪನ್ಮೂಲ ತರಬೇತುದಾರರಾದ ಭಾರತಿ ಶೇವ್‌ಗೂರ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಭಾರತಿ ಶೇವ್‌ಗೂರ ಅವರು ಬರಹಗಾರರಾಗಿ ತಮ್ಮ ದೃಷ್ಟಿಕೋನ ನೀಡಿದರು. ವಿವಿಧ ಕಲಾ ಶೈಲಿಗಳ ಬಗ್ಗೆ ಅಭಿರುಚಿಯನ್ನು ಹೇಗೆ ಬೆಳೆಸಿದರು ಎಂಬುದರ ಕುರಿತು ಮಾತನಾಡಿದರು. ಬಿಹಾರದಿಂದ ಬಂದ ಕಲಾವಿದರು ಈ ಸಾಂಪ್ರದಾಯಿಕ ಕಲೆಯ ಜ್ಞಾನವನ್ನು ಯುವ ಪೀಳಿಗೆಗೆ ಪ್ರದರ್ಶಿಸಲು ಮತ್ತು ವಿಸ್ತರಿಸಲು ಮತ್ತು ಕರ್ನಾಟಕದ ಈ ನೈಋತ್ಯ ಭಾಗದಲ್ಲಿ ಛಾಪು ಮೂಡಿಸುವ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಶ್ರವಣ್ ಕುಮಾರ್ ಅವರು ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮ ಪಯಣದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. “ನನ್ನ ತಾಯಿಯಿಂದ ಈ ಕಲೆಯನ್ನು ಕಲಿತಿದ್ದರಿಂದ ನಾನು ಚಿಕ್ಕ ವಯಸ್ಸಿನಿಂದಲೂ ಮಧುಬನಿಯನ್ನು ಮೆಚ್ಚಿದೆ. ನನ್ನ ಕುಟುಂಬದ ಹೆಚ್ಚಿನ ಸದಸ್ಯರು ಈ ಕಲೆಯಲ್ಲಿ ವೃತ್ತಿಪರರು. ನಾವು ನಮ್ಮದೇ ಆದ ನೈಸರ್ಗಿಕ ಬಣ್ಣಗಳನ್ನು ತಯಾರಿಸುತ್ತೇವೆ ಮತ್ತು ನಂತರ ಅವುಗಳನ್ನು ಚಿತ್ರಕಲೆಗಳಲ್ಲಿ ಬಳಸುತ್ತೇವೆ,” ಎಂದು ಅವರು ವಿವರಿಸಿದರು. “ಈ ಕಲೆಯನ್ನು ಉಳಿಸಲು ನಾವು ನಮ್ಮ ಕುಟುಂಬಕ್ಕೆ ಮೊದಲು ಇದನ್ನು ಕಲಿಸುತ್ತೇವೆ. ಆಸಕ್ತಿ ಹೊಂದಿರುವ ಯಾವುದೇ ವಿದ್ಯಾರ್ಥಿಗಳಿಗೆ ಈ ಕಲೆಯನ್ನು ಕಲಿಸಲು ನಾವು ಸಂತೋಷಪಡುತ್ತೇವೆ,” ಎಂದು ಹೇಳಿದರು.

ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಊರ್ಮಿಳಾ ಶೆಟ್ಟಿ ಮಾತನಾಡಿ, ಕಲೆಯು ವ್ಯಾಪಾರೀಕರಣದ ಮಲಮಗಳಂತಾಗಿದೆ ಎಂದು ಗಮನಿಸಿದರು. ಕಾರ್ಯಾಗಾರದಲ್ಲಿ ಶಿಶಿರ್ ಜಗತಾಪ್, ಸಿಂಧುಶ್ರೀ ಪಿ.ವಿ., ಆತ್ಮಿ ರೈ, ರಕ್ಷಾ, ಅಕ್ಷಿತಾ, ನಯನಾ ಆರ್.ಆಚಾರ್ಯ, ವಿವೇಕ್ ಎ.ಆರ್., ಶರ್ವಾಣಿ ಭಟ್, ಶ್ರೀವಿದ್ಯಾ ಆರ್., ಅದ್ವೈತ್ ಆರ್. ಮತ್ತು ಕೃಪಾ ಜಿ.ಶೇಟ್ ಭಾಗವಹಿಸಿದರು.

ಕಲಾವಿದ ಜನಾರ್ದನ ಹಾವಂಜೆ ಅವರು ಶ್ರವಣ ಪಾಸ್ವಾನ್ ಮತ್ತು ಮಧುಬನಿ ಮತ್ತು ಘೋಡನಾ ಕಲಾ ಶೈಲಿಗಳ ಮೂಲಭೂತ ಅಂಶಗಳನ್ನು ಪರಿಚಯಿಸಿದರು. ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಕಾರ್ಯಾಗಾರವನ್ನು ಪರಿಚಯಿಸಿದರು. ರೇಷ್ಮಾ ಎಸ್.ಶೆಟ್ಟಿ ಹಾಗೂ ಸಂತೋಷ್ ಅಂದ್ರಾದೆ ಕಾರ್ಯಾಗಾರದ ಆಯೋಜನೆಯಲ್ಲಿ ಸಹಕರಿಸಿದರು. ಭಾವನಾ ಪ್ರತಿಷ್ಠಾನದ ಆಶ್ರಯದಲ್ಲಿ 2023ರ ಏಪ್ರಿಲ್ 27ರಿಂದ 30ರವರೆಗೆ ಉಡುಪಿಯಲ್ಲಿ ಮತ್ತೊಂದು ಕಾರ್ಯಾಗಾರ ನಡೆಯಲಿದೆ.

- Advertisement -
spot_img

Latest News

error: Content is protected !!