Saturday, May 4, 2024
Homeಕ್ರೀಡೆಕೃನಾಲ್ ಪಾಂಡ್ಯ ಬದಲಿಗೆ ಹೊಸ ಉಪನಾಯಕನ ನೇಮಿಸಿದ ಲಕ್ನೋ ಸೂಪರ್ ಜೈಂಟ್ಸ್

ಕೃನಾಲ್ ಪಾಂಡ್ಯ ಬದಲಿಗೆ ಹೊಸ ಉಪನಾಯಕನ ನೇಮಿಸಿದ ಲಕ್ನೋ ಸೂಪರ್ ಜೈಂಟ್ಸ್

spot_img
- Advertisement -
- Advertisement -

ಲಕ್ನೋ: ಐಪಿಎಲ್ ನ ಹೊಸ ಫ್ರಾಂಚೈಸಿಗಳಲ್ಲಿ ಒಂದಾದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿಯ ಐಪಿಎಲ್ ಗೆ ಸಿದ್ಧತೆ ನಡೆಸುತ್ತಿದೆ. ಇದೀಗ ತಂಡದ ಉಪ ನಾಯಕನ ಸ್ಥಾನ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಳೆದ ಎರಡು ಸೀಸನ್ ಗಳಲ್ಲಿ ಕೆ.ಎಲ್ ರಾಹುಲ್ ನಾಯಕರಾಗಿದ್ದು, ಕೃನಾಲ್ ಪಾಂಡ್ಯ ಅವರು ಉಪ ನಾಯಕರಾಗಿದ್ದರು. ಇದೀಗ ಕೃನಾಲ್ ಪಾಂಡ್ಯ ಬದಲು ನಿಕೋಲಸ್ ಪೂರನ್ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರಾಹುಲ್ ಅವರು ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ 29ನೇ ಸಂಖ್ಯೆಯ ಉಪನಾಯಕನ ಜೆರ್ಸಿಯನ್ನು ಪೂರನ್ ಗೆ ಹಸ್ತಾಂತರಿಸಿದರು.

ಈ ಹಿಂದೆ ಪಂಜಾಜ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ನಿಕೋಲರ್ ಪೂರನ್ ಅವರನ್ನು 2023ರಲ್ಲಿ ಲಕ್ಷ್ಮೀ ಸೂಪರ್ ಜೈಂಟ್ಸ್ ತಂಡವು ಖರೀದಿ ಮಾಡಿತ್ತು. 16 ಕೋಟಿ ರೂ ಗೆ ಪೂರನ್ ಅವರು ಲಕ್ಷ್ಮೀ ತಂಡದ ಪಾಲಾಗಿದ್ದರು.

ಸ್ಫೋಟಕ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಗೆ ಹೆಸರುವಾಸಿಯಾಗಿರುವ ಟ್ರಿನಿಡಾಡಿಯನ್ ಕ್ರಿಕೆಟಿಗ ಪೂರನ್, ಜಾಗತಿಕವಾಗಿ ಟಿ20 ಸ್ವರೂಪದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ.

- Advertisement -
spot_img

Latest News

error: Content is protected !!