- Advertisement -
- Advertisement -
ಬೆಳ್ತಂಗಡಿ; ಸೌತಡ್ಕ ಮಹಾಗಣಪತಿ ದೇಗುಲದಲ್ಲಿ ಅನ್ಯಕೋಮಿನ ಜೋಡಿಯೊಂದು ಪತ್ತೆಯಾಗಿದೆ. ಹಿಂದೂಪರ ಸಂಘಟನೆ ಕಾರ್ಯಕರ್ತರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಪ್ಪಳ ಮೂಲದ ಯುವಕ ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದಲ್ಲಿ ಸೌತಡ್ಕ ದೇಗುಲಕ್ಕೆ ಬಂದಿದ್ದಾರೆ. ಆಟೋ ಇಳಿದು ಯುವಕ ಆಟೋ ಚಾಲಕನಿಗೆ ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಹುಡುಗನ ಹೆಸರು ಬೇರೆ ಸಮುದಾಯಕ್ಕೆ ಸೇರಿರುವ ಮಾಹಿತಿ ತಿಳಿದು ಬಂದಿದ್ದು ಕೂಡಲೇ ರಿಕ್ಷಾ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಿದ್ದಾರೆ.
ಹಿಂದೂಪರ ಸಂಘಟನೆ ಕಾರ್ಯಕರ್ತರು ಅನ್ಯ ಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೋಪ್ಪಿಸಿದ್ದಾರೆ.ಹಿಂದೂ ಸಂಘಟನೆಯವರು ಅವರ ಮನೆಯವರು ಬಂದ ಮೇಲೆಯೇ ಕಳುಹಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಧರ್ಮಸ್ಥಳ ಠಾಣೆಯ ಪೊಲೀಸರು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
- Advertisement -