Saturday, June 6, 2026
HomeUncategorizedಚಿಕ್ಕಮಗಳೂರು;ಗೃಹಣಿಯನ್ನು ಕೊಲೆಗೈದ ವಾಟ್ಸಾಪ್ ಸ್ನೇಹಿತ

ಚಿಕ್ಕಮಗಳೂರು;ಗೃಹಣಿಯನ್ನು ಕೊಲೆಗೈದ ವಾಟ್ಸಾಪ್ ಸ್ನೇಹಿತ

- Advertisement -
- Advertisement -

ಚಿಕ್ಕಮಗಳೂರು ಅನೈತಿಕ ಸಂಬಂಧಕ್ಕೆ ಗೃಹಣಿಯೊಬ್ಬಳು ಬಲಿಯಾಗಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ. . ತೃಪ್ತಿ (25) ಕೊಲೆಯಾದ ಗೃಹಿಣಿ. ತೃಪ್ತಿಯ ವಾಟ್ಸಾಪ್ ಗೆಳೆಯ ಚಿರಂಜೀವಿ ಕೊಲೆಗೈದ ಆರೋಪಿ.

ಮೃತ ತೃಪ್ತಿಗೆ ವಾಟ್ಸಾಪ್ ಮೂಲಕ ಆರೋಪಿ ಚಿರಂಜೀವಿ ಪರಿಚಿತನಾಗಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.ತಿಂಗಳ ಹಿಂದೆ ಚಿರಂಜೀವಿ ಜೊತೆ ಮೃತ ತೃಪ್ತಿ ಓಡಿ ಹೋಗಿದ್ದಳು. ಬಳಿಕ ವಾಪಾಸ್ ಕರೆತಂದು ಕುಟುಂಬದವರು ರಾಜಿ ಸಂಧಾನ ಮಾಡಿದ್ದರು. ಆ ಬಳಿಕ ಚಿರಂಜೀವಿ ಜೊತೆ ತೃಪ್ತಿ ಸಂಪರ್ಕ ಕಡಿದುಕೊಂಡಿದ್ದಳು.ಇದರಿಂದ ಚಿರಂಜೀವಿ ಕುಪಿತನಾಗಿದ್ದ.

ಇಂದು ಚಿರಂಜೀವಿ ತೃಪ್ತಿ ಮನೆಗೆ ಬಂದಿದ್ದ. ಹೀಗೆ ಬಂದವನು ಮಕ್ಕಳ ಎದುರೇ ತೃಪ್ತಿಗೆ ಚಾಕುವಿನಿಂದ ಚುಚ್ಚಿದ್ದ.  ಚಾಕುವಿನಿಂದ ಚುಚ್ಚಿ ಸಾಯಲಿಲ್ಲ ಎಂದು ಚಿರಂಜೀವಿ ಮನೆ ಹಿಂದಿನ ಕೆರೆಗೆ ಎಸೆದಿದ್ದಾನೆ. ಈ ವೇಳೆ ತೃಪ್ತಿ ಪತಿಗೆ ಕೆಲಸಕ್ಕೆ ಹೋಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!