Saturday, June 6, 2026
Homeಕರಾವಳಿಬಂಟ್ವಾಳ: ಪ್ರೇಮ ವೈಫಲ್ಯದಿಂದ ನೊಂದು ಯುವಕ ಆತ್ಮಹತ್ಯೆ

ಬಂಟ್ವಾಳ: ಪ್ರೇಮ ವೈಫಲ್ಯದಿಂದ ನೊಂದು ಯುವಕ ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ: ಪ್ರೇಮ ವೈಫಲ್ಯದಿಂದ ನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ನಡೆದಿದೆ. ‌ಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಸಚಿನ್ (24) ಮೃತ ಯುವಕ.

ಸಚಿನ್ ಬಂಟ್ವಾಳದಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅ.18 ರಂದು ಕೆಲಸಕ್ಕೆ ಹೋದವರು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಅವರನ್ನು ಹುಡುಕಲು ಶುರು ಮಾಡಿದ್ದರು.ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಬಂಟ್ವಾಳದ ಕಾಮಾಜೆ ಮಾವನ ಮನೆಯರವಲ್ಲಿ ವಿಚಾರಿಸಿದ್ದಾರೆ. ಅವರು ಹುಡುಕಿದಾಗ ಮುಂಜಾನೆ ಸುಮಾರು 3 ಗಂಟೆಯ ವೇಳೆ ಈತನ ಸ್ಕೂಟರ್ ಬಿ.ಮೂಡ ಗ್ರಾಮದ ಮಿತ್ತಕೋಡಿ ಎಂಬಲ್ಲಿರುವ ಮೈದಾನದ ಬಳಿ ಪತ್ತೆಯಾಗಿದೆ.

ಆದರೆ ಸಚಿನ್ ಅಲ್ಲಿ ಕಾಣದ ಹಿನ್ನೆಲೆಯಲ್ಲಿ ಫೋನ್ ಮಾಡಿದಾಗ ಅಲ್ಲೇ ಸಮೀಪದ ಗುಡ್ಡವೊಂದರಲ್ಲಿ ಪೋನ್ ರಿಂಗ್ ಕೇಳುತ್ತಿತ್ತು ಎಂದು ಹೋಗಿ ನೋಡಿದಾಗ ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.

ಆತ್ಮಹತ್ಯೆ ಮಾಡುವ ಮೊದಲು ಡೆತ್ ನೋಟ್  ಬರೆದು ಕಿಸೆಯಲ್ಲಿಟ್ಟಿದ್ದಾರೆ. ಅದರಲ್ಲಿ, ಪ್ರೇಮ ವೈಫಲ್ಯವೇ ಆತ್ಮಹತ್ಯೆ ಕಾರಣ ಎಂಬ ಬರೆದಿದ್ದಾರೆ ಎನ್ನಲಾಗಿದೆ.  ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಪೋಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ.ನಗರ ಠಾಣಾ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಮತ್ತು ಎಸ್. ಐ.ರಾಮಕೃಷ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!