- Advertisement -
![]()
- Advertisement -
ಮೂಡಬಿದಿರೆ; ಕೆಎಸ್‌ಆರ್‌ಟಿಸಿ ಬಸ್ ಗೂಡ್ಸ್ ಮಿನಿ ಟೆಂಪೋಗೆ ಡಿಕ್ಕಿ; ಟೆಂಪೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾರ್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಸಮೀಪ ನಡೆದಿದೆ. ಬಂಟ್ವಾಳ ತಾಲೂಕು ಕೆಲಿಂಜೆ ನಿವಾಸಿ ಲೆಸ್ಟರ್ ಡೇವಿಡ್ ಡಿ’ಸೋಜ (30 ) ಮೃತರು.
ಮೂಡಬಿದಿರೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಕಾರ್ಕಳ ಕಡೆಯಿಂದ ಮೂಡಬಿದಿರೆ ಕಡೆಗೆ ಬರುತ್ತಿದ್ದ ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
- Advertisement -


