Thursday, June 4, 2026
Homeಕರಾವಳಿಕಡಬ: ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಎಸ್ಕೇಪ್ ಆಗಲು ಯತ್ನಿಸಿದ ಲಾರಿ ಚಾಲಕ; ಲಾರಿ ಡ್ರೈವರ್ ನನ್ನು ಪಂಜದಲ್ಲಿ ಹಿಡಿದ...

ಕಡಬ: ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಎಸ್ಕೇಪ್ ಆಗಲು ಯತ್ನಿಸಿದ ಲಾರಿ ಚಾಲಕ; ಲಾರಿ ಡ್ರೈವರ್ ನನ್ನು ಪಂಜದಲ್ಲಿ ಹಿಡಿದ ರಿಕ್ಷಾ ಚಾಲಕರು

- Advertisement -
- Advertisement -

ಕಡಬ: ದ್ವಿಚಕ್ರವಾಹನಕ್ಕೆ   ಡಿಕ್ಕಿ ಹೊಡೆದು ಲಾರಿ ಚಾಲಕ ಎಸ್ಕೇಪ್ ಆಗಲು ಯತ್ನಿಸಿದ ಘಟನೆ ಕಾಣಿಯೂರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಕಡಬ ತಾಲೂಕಿನ  ಕಾಣಿಯೂರು ಸಮೀಪ ಕೂಡುರಸ್ತೆ ಎಂಬಲ್ಲಿ ಆಕ್ಟಿವಾ ಮತ್ತು ಲಾರಿ ಅಪಘಾತ ಸಂಭವಿಸಿತ್ತು ಘಟನೆಯಿಂದ ಆಕ್ಟಿವಾ ಸವಾರ ಶೀನಪ್ಪ ಗಾಯಗೊಂಡಿದ್ದರು. ಗಾಯಳುವನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಾಯಿಸಲಾಗಿತ್ತು. ಈ ವೇಳೆ ಜೊತೆಗಿದ್ದ ಲಾರಿ ಚಾಲಕ ಈಗ ಬರುತ್ತೇನೆ ಎಂದು ಹೇಳಿ ಎಸ್ಕೇಪ್ ಆಗಿದ್ದಾನೆ. ಕೊನೆಗೆ ಪರಾರಿಯಾದ ಲಾರಿ ಚಾಲಕನನ್ನು ರಿಕ್ಷಾ ಚಾಲಕರು ಪಂಜ ಸಮೀಪ ಹಿಡಿದು, ಕಾಣಿಯೂರಿಗೆ ವಾಪಾಸ್ ಕರೆ ತಂದಿದ್ದಾರೆ.  ಗಾಯಗೊಂಡ ಆಕ್ಟಿವಾ ಸವಾರನನ್ನು  ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಯಿಸಲಾಗಿದೆ.

- Advertisement -

Latest News

error: Content is protected !!