Monday, April 29, 2024
Homeಕರಾವಳಿಬಂಟ್ವಾಳ: ಇಂದು ನಸುಕಿನ ವೇಳೆ ಭೀಕರ ಅಪಘಾತ, ಲಾರಿ ಬೈಕ್ ಡಿಕ್ಕಿ !

ಬಂಟ್ವಾಳ: ಇಂದು ನಸುಕಿನ ವೇಳೆ ಭೀಕರ ಅಪಘಾತ, ಲಾರಿ ಬೈಕ್ ಡಿಕ್ಕಿ !

spot_img
- Advertisement -
- Advertisement -

ಬಂಟ್ವಾಳ : ಇಂದು ನಸುಕಿನ ವೇಳೆಗೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು , ಬೈಕ್ ನಜ್ಜುಗುಜ್ಜಾಗಿದೆ .

ಇಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು , ಅಲ್ಲಲ್ಲಿ ರಸ್ತೆಯಂಚಿನಲ್ಲಿ ಅಪಾಯ ಎದುರಿಸುವಂತಾಗಿದೆ. ಸೂರ್ಯೋದಯ ಆಗುವ ಮೊದಲು ಪ್ರಖರ ಲೈಟ್ ನೊಂದಿಗೆ ವಾಹನಗಳು ಸಾಗುವ ವೇಳೆ ದ್ವಿಚಕ್ರ ವಾಹನ ಸವಾರರೂ ಗಲಿಬಿಲಿಗೊಳ್ಳುವಂತಾಗಿದ್ದು , ಈ ಭಾಗದಲ್ಲಿ ಜಾಗರೂಕತೆಯಿಂದ ವಾಹನ ಸಂಚರಿಸಬೇಕಾಗುತ್ತದೆ. ಅಪಘಾತಗಳು ಆಗಾಗ್ಗೆ ಸಂಭವಿಸುವ ಪೂರ್ಲಿಪ್ಪಾಡಿಯಲ್ಲಿ ಮತ್ತೊಂದು ಅಪಘಾತ ನಡೆದಿದೆ . ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

- Advertisement -
spot_img

Latest News

error: Content is protected !!