Tuesday, July 14, 2026
Homeಕರಾವಳಿಗುರುಪುರ ಕೈಕಂಬ ಸಮೀಪ ಲಾರಿ ಹಾಗೂ ಬಸ್‌ ಅಪಘಾತ; ಬಸ್‌ ಚಾಲಕನ ಕಾಲು ಮುರಿದು ಗಂಭೀರ...

ಗುರುಪುರ ಕೈಕಂಬ ಸಮೀಪ ಲಾರಿ ಹಾಗೂ ಬಸ್‌ ಅಪಘಾತ; ಬಸ್‌ ಚಾಲಕನ ಕಾಲು ಮುರಿದು ಗಂಭೀರ ಗಾಯ

- Advertisement -
- Advertisement -

ಗುರುಪುರ: ಮಂಗಳೂರು ಹೊರವಲಯದ ಗುರುಪುರ ಕೈಕಂಬ ಸಮೀಪ  ವಿರುದ್ಧ ದಿಕ್ಕಿನಿಂದ ಅತಿ ವೇಗವಾಗಿ ಬಂದ ಲಾರಿಯೊಂದು ಪ್ರಯಾಣಿಕರ ಬಸ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಚಾಲಕನ ಕಾಲು ಮುರಿದು ಹೋಗಿದೆ ಎನ್ನಲಾಗಿದೆ.

ಇನ್ನು ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದಾಗಿ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!