Monday, June 8, 2026
Homeಕರಾವಳಿನೆಲ್ಯಾಡಿ ಬಳಿ ರಾ.ಹೆ. 75 ರಲ್ಲಿ ಲಾರಿ ಪಲ್ಟಿ, ವಾಹನ ಸಂಚಾರದಲ್ಲಿ ವ್ಯತ್ಯಯ

ನೆಲ್ಯಾಡಿ ಬಳಿ ರಾ.ಹೆ. 75 ರಲ್ಲಿ ಲಾರಿ ಪಲ್ಟಿ, ವಾಹನ ಸಂಚಾರದಲ್ಲಿ ವ್ಯತ್ಯಯ

- Advertisement -
- Advertisement -

ಪುತ್ತೂರು: ಕಬ್ಬಿಣ ಸರಳು ಸಾಗಿಸುತ್ತಿದ್ದ ಲಾರಿಯೊಂದು ನೆಲ್ಯಾಡಿ ಬಳಿ ಪಲ್ಟಿಯಾಗಿದೆ.ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.

ಬೆಂಗಳೂರಿನಿಂದ ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಲಾರಿ ಕಡಬ ತಾಲೂಕಿನ ನೆಲ್ಯಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

ಲಾರಿ ತೆರವು ಕಾರ್ಯ ಆಗುವವರೆಗೂ ಮಂಗಳೂರಿನಿಂದ ಬೆಂಗಳೂರಿಗೆ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.


ನೆಲ್ಯಾಡಿ-ಪುತ್ಯೆ-ಕೊಕ್ಕಡ-ಪೆರಿಯಶಾಂತಿ ಮಾರ್ಗವಾಗಿ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಸೂಚಿಸಲಾಗಿದ್ದು, ನೆಲ್ಯಾಡಿ ಹೊರ ಠಾಣಾ ಪೊಲೀಸರಿಂದ ಲಾರಿ ತೆರವು ಕಾರ್ಯ ನಡೆದಿದೆ.

- Advertisement -

Latest News

error: Content is protected !!