Thursday, June 25, 2026
Homeಕರಾವಳಿಕುಂದಾಪುರ: ವೇಗವಾಗಿ ಬಂದ ಲಾರಿಯಿಂದ ಮಗುವನ್ನು ರಕ್ಷಿಸಿದ ತಾಯಿ ಸಾವು !

ಕುಂದಾಪುರ: ವೇಗವಾಗಿ ಬಂದ ಲಾರಿಯಿಂದ ಮಗುವನ್ನು ರಕ್ಷಿಸಿದ ತಾಯಿ ಸಾವು !

- Advertisement -
- Advertisement -

ಕುಂದಾಪುರ: ಇಂದು ಹೆಮ್ಮಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿಯಿಂದ ತನ್ನ ಮಗುವನ್ನು ರಕ್ಷಿಸುವ ವೇಳೆ 35 ವರ್ಷದ ಮಹಿಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.

ಮೃತರನ್ನು ಅರೆಹೊಳೆ ಯರುಕೋಣೆ ಸಮೀಪದ ರಾಗಿಹಕ್ಲು ನಿವಾಸಿ ಜ್ಯೋತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆಕೆಯ ಪತಿ ಶರತ್ ಹಾಗೂ ಮಗುವಿಗೆ ಗಾಯಗಳಾಗಿವೆ.

ಹೆಮ್ಮಾಡಿಯಿಂದ ಕುಂದಾಪುರ ಕಡೆಗೆ ಮಣ್ಣು ಸಾಗಿಸುತ್ತಿದ್ದ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿದ್ದಾರೆ. ದಂಪತಿ ಕುಂದಾಪುರದಲ್ಲಿ ವೃದ್ಧಾಶ್ರಮ ಉದ್ಘಾಟನೆಗೆ ತೆರಳುತ್ತಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!