Wednesday, May 1, 2024
Homeತಾಜಾ ಸುದ್ದಿ543 ಲೋಕಸಭಾ ಕ್ಷೇತ್ರಗಳ ಚುನಾವಣಾ ದಿನಾಂಕ ಘೋಷಣೆ;  ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ

543 ಲೋಕಸಭಾ ಕ್ಷೇತ್ರಗಳ ಚುನಾವಣಾ ದಿನಾಂಕ ಘೋಷಣೆ;  ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ

spot_img
- Advertisement -
- Advertisement -

ನವದೆಹಲಿ: 543 ಲೋಕಸಭಾ ಕ್ಷೇತ್ರಗಳ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಈ ಬಗ್ಗೆ ದೆಹಲಿಯ ವಿಜ್ಞಾನಭವನದಲ್ಲಿ ಸುದ್ದಿಗೋಷ್ಟಿ ನಡೆದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಏಳು ಹಂತದಲ್ಲಿ ಲೋಕಸಭಾ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ಮೇ 7 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಏಪ್ರಿಲ್ 19 ರಂದು ಮೊದಲ ಹಂತ, ಏಪ್ರಿಲ್ 26 ರಂದು ಎರಡನೇ ಹಂತ, ಮೇ 7 ರಂದು ಮೂರನೇ ಹಂತ, ಮೇ 13 ರಂದು ನಾಲ್ಕನೇ ಹಂತ, ಮೇ 20 ರಂದು ಐದನೇ ಹಂತ, ಮೇ 25 ರಂದು ಆರನೇ ಹಂತ ಮತ್ತು ಜೂನ್ 1 ರಂದು ಏಳನೇ ಹಂತದ ಮತದಾನ ನಡೆಯಲಿದೆ.

ಇನ್ನು ದೇಶದಲ್ಲಿ 97 ಕೋಟಿ ಮತದಾರರಿದ್ದು, 10 ಲಕ್ಷದ 55 ಸಾವಿರ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಮತದಾನಕ್ಕಾಗಿ 55  ಲಕ್ಷ ಇವಿಎಂ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ ಎಂದರು.49.7 ಕೋಟಿ ಪುರುಷ ಹಾಗೂ 47.1 ಕೋಟಿ ಮಹಿಳಾ ಮತದಾರರಿದ್ದಾರೆ.19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!