Thursday, September 10, 2026
Homeಕರಾವಳಿಉಡುಪಿಉಡುಪಿ ಆರ್ ಟಿ ಓ ಅಧಿಕಾರಿ ಮನೆಗೆ ಲೋಕಾಯುಕ್ತ ದಾಳಿ

ಉಡುಪಿ ಆರ್ ಟಿ ಓ ಅಧಿಕಾರಿ ಮನೆಗೆ ಲೋಕಾಯುಕ್ತ ದಾಳಿ

- Advertisement -
- Advertisement -

ಉಡುಪಿ;  ಆರ್ ಟಿ ಓ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಡುಪಿ ಆರ್ ಟಿ ಓ ಲಕ್ಷ್ಮೀನಾರಾಯಣ ಪಿ ನಾಯಕ್ ಅವರ ಕಿನ್ನಿಮುಲ್ಕಿ ಫ್ಲ್ಯಾಟ್  ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ಲಕ್ಷ್ಮೀನಾರಾಯಣ ಪಿ ನಾಯಕ್ ಅವರ ಕುಮುಟಾ ಹಾಗೂ ಪಡುಅಲೆವೂರು ನಲ್ಲಿರುವ ಸಂಬಂಧಿಕರ ಮನೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆ ಕುಮಟಾದವರಾಗಿರುವ ಲಕ್ಷ್ಮೀ ನಾರಾಯಣ ಪಿ ನಾಯಕ್ ಅವರ ವಿರುದ್ಧ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನು ಆರ್‌ಟಿಓ ಬ್ರೋಕರ್ ಪಡು ಅಲೆವೂರು ನಿವಾಸಿ ರವಿ ಮನೆಗೂ ಲೋಕಾ ದಾಳಿಯಾಗಿದೆ. ರವಿ ಮನೆಯಲ್ಲಿ ಲೋಕಾಯುಕ್ತ ತಂಡದಿಂದ ಪರಿಶೀಲನೆ ನಡೆಯುತ್ತಿದೆ.

- Advertisement -

Latest News

error: Content is protected !!