Wednesday, April 24, 2024
Homeತಾಜಾ ಸುದ್ದಿರಾಜ್ಯದಲ್ಲಿ ಜುಲೈ 5 ರಿಂದ ಲಾಕ್ ಡೌನ್ ರಿಲೀಸ್ : ದೇವಸ್ಥಾನ ತೆರೆಯೋದಕ್ಕೆ ಗ್ರೀನ್...

ರಾಜ್ಯದಲ್ಲಿ ಜುಲೈ 5 ರಿಂದ ಲಾಕ್ ಡೌನ್ ರಿಲೀಸ್ : ದೇವಸ್ಥಾನ ತೆರೆಯೋದಕ್ಕೆ ಗ್ರೀನ್ ಸಿಗ್ನಲ್ , ಜಿಮ್ ಮಾಲ್ ಗಳು ಓಪನ್

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಕಾರಣ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ದೇವಾಲಯಗಳಲ್ಲಿ ಪೂಜೆಗೆ ಮಾತ್ರ ಸೀಮಿತಿಗೊಳಿಸಿ, ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಇಂತಹ ದೇವಾಲಯಗಳನ್ನು ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮದೊಂದಿಗೆ ತೆರೆಯೊದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಎಲ್ ವರಲಕ್ಷ್ಮೀ ಆದೇಶ ಹೊರಡಿಸಿದ್ದು, ಧಾರ್ಮಿಕ ಕತ್ತಿ ಸಚಿವರು ದಿನಾಂಕ 24-06-2021ರ ಟಿಪ್ಪಣಿಯಂತೆ, ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವ ಕಾರಣ, ಬಹುತೇಕ ನಿಯಮಗಳನ್ನು ಸಡಿಲಿಕೆ ಮಾಡಿ, ಅನ್ ಲಾಕ್ ಮಾಡಿ ಆದೇಶ ಹೊರಡಿಸಲಾಗಿರುತ್ತದೆ. ಬಸ್, ಮೆಟ್ರೋ ಸಂಚಾರ, ಹೋಟೆಲ್, ಕ್ಲಬ್ ಗಳು, ಹೊರಾಂಗಣ ಕ್ರೀಡೆ, ಲಾಡ್ಜ್, ಜಿಮ್ ಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.ಆದರೆ ಸಿನಿಮಾ ಥಿಯೇಟರ್ ಗಳು ತೆರೆಯೋದಕ್ಕೆ ಅವಕಾಶ ಇಲ್ಲ.

ಈ ಹಿನ್ನಲೆಯಲ್ಲಿ ರಾಜ್ಯದ ದೇವಾಲಗಳಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು, ಭಕ್ತಾದಿಗಳಿಗೆ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗೆ ಸೀಮಿತಗೊಳಿಸಿ, ದೇವಾಲಗಳನ್ನು ತೆರೆಯಬೇಕೆನ್ನುವುದು ಭಕ್ತಾದಿಗಳ ಕೋರಿಕೆಯಾಗಿರುತ್ತದೆ.

ಆದ್ದರಿಂದ ರಾಜ್ಯದ ದೇವಾಲಯಗಳಲ್ಲಿ ಕಡ್ಡಾಯ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಂಡು, ಭಕ್ತಾಧಿಗಳಿಗೆ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗೆ ಸೀಮಿತಗೊಳಿಸಿ ದೇವಾಲಯಗಳನ್ನು ತೆರೆಯಲು ಆದೇಶಿಸಿದ್ದಾರೆ.

ಅನ್ ಲಾಕ್ 3.0 ನಲ್ಲಿ ಏನಿರುತ್ತೆ..ಏನಿರಲ್ಲ..? ಸಿಎಂ ಸುದ್ದಿಗೋಷ್ಟಿಯ ಹೈಲೆಟ್ಸ್

1) ಮಾಲ್ ಗಳ ಓಪನ್ ಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

2) ಮದುವೆ ಸಮಾರಂಭಕ್ಕೆ 100 ಜನರಿಗೆ ಅನುಮತಿ

3) ವೀಕೆಂಡ್ ಕರ್ಪ್ಯೂ ಇರುವುದಿಲ್ಲ

4) ಜು.5 ರಿಂದ ಶಾಪಿಂಗ್ ಮಾಲ್ ತೆರೆಯಲು ಅನುಮತಿ

5) ಶಾಲೆ, ಕಾಲೇಜು ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು

6) ಬಾರ್ ಗೆ ಅನುಮತಿ

7) ಚಿತ್ರಮಂದಿರ ತೆರೆಯಲು ಅವಕಾಶ ಇಲ್ಲ

8) ಸರ್ಕಾರಿ ಕಛೇರಿಗಳಿಗೆ ವಾಣಿಜ್ಯ ಚಟುವಟಿಕೆಗಳಿಗೆ 100 ರಷ್ಟು ಅವಕಾಶ

9) ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆಯಿಂದ 5 ಗಂಟೆವರೆಗೆ ನೈಟ್ ಕರ್ಪ್ಯೂ

10) ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು 20 ಮಂದಿಗೆ ಮಾತ್ರ ಅವಕಾಶ

11) ಸ್ವಿಮ್ಮಿಂಗ್ ಫೂಲ್ ನಲ್ಲಿ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ

12) ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕಷ್ಟೇ ಅವಕಾಶ

13) ರಾತ್ರಿ 9 ಗಂಟೆವರೆಗೆ ಅಂಗಡಿ ಓಪನ್

14) ಮೆಟ್ರೋದಲ್ಲಿ 100 ರಷ್ಟು ಪ್ರೇಕ್ಷಕರಿಗೆ ಅವಕಾಶ

15) ಬಸ್ ಗಳಲ್ಲಿ ಶೇಕಡ 100 ರಷ್ಟು ಪ್ರಯಾಣಿಕರಿಗೆ ಅನುಮತಿ

- Advertisement -
spot_img

Latest News

error: Content is protected !!