Friday, June 26, 2026
Homeತಾಜಾ ಸುದ್ದಿಬೆಂಗಳೂರಲ್ಲಿ ಎಲ್ಲಿ ನೋಡಿದ್ರೂ ಟ್ರಾಫಿಕ್ ಜಾಮ್, ಎಲ್ಲರ ಚಿತ್ತ ಈಗ ಊರಿನತ್ತ...

ಬೆಂಗಳೂರಲ್ಲಿ ಎಲ್ಲಿ ನೋಡಿದ್ರೂ ಟ್ರಾಫಿಕ್ ಜಾಮ್, ಎಲ್ಲರ ಚಿತ್ತ ಈಗ ಊರಿನತ್ತ…

- Advertisement -
- Advertisement -

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇಂದು ಏಕಾಏಕಿ ಪ್ರಮುಖ ರಸ್ತೆಗಳು ಜಾಮ್ ಆಗಿವೆ. ಕೆ.ಆರ್.ಸರ್ಕಲ್, ಕಾರ್ಪೋರೇಷನ್ ಸರ್ಕಲ್ ಕಂಪ್ಲೀಟ್ ಜಾಮ್ ಆಗಿವೆ. ಕೊರೊನಾದಿಂದಾಗಿ ಇಷ್ಟು ದಿನ ಖಾಲಿ ಖಾಲಿಯಾಗಿ ಕಾಣುತ್ತಿದ್ದ ರಸ್ತೆಗಳು ಇಂದು ಫುಲ್ ಹಿಂದಿನ ಬೆಂಗಳೂರಿನಂತೆ ಜಾಮ್ ಆಗಿವೆ.

ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರಿನಲ್ಲಿ 1 ವಾರಗಳ ಕಾಲ ಲಾಕ್ ಡೌನ್ ಇರೋದರಿಂದ ಬೆಂಗಳೂರಿನಿಂದ ಊರಿನತ್ತ ಮುಖ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಗರದಲ್ಲಿ ಟ್ರ್ಯಾಫಿಕ್ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಸಿಗ್ನಲ್ ಗಳಲ್ಲಿ ಗಂಟೆ ಗಂಟೆ ಕಾಯಬೇಕಾದ ಸ್ಥಿತಿ ಉಂಟಾಗಿದೆ

ಇನ್ನು ಎಲ್ಲಾ ಕಡೆ ಕಾರುಗಳು, ಆಟೋ, ಬೈಕ್ ಗಳಿಗಿಂತ, ಗೂಡ್ಸ್ ವಾಹನಗಳದ್ದೇ ಕಾರುಬಾರು ಜೋರಾಗಿದೆ. ಬೆಂಗಳೂರು ಬಿಡುತ್ತಿರುವವರು ಹೆಚ್ಚಿನವರು ಬಹುತೇಕರು ಮೆನ ಖಾಲಿ ಮಾಡಿಕೊಂಡೇ ಹೋಗುತ್ತಿದ್ದಾರೆ. ಮತ್ತೆ ಬೆಂಗಳೂರು ಸಹವಾಸ ಬೇಡ ಎನ್ನುವವರು ಹೆಚ್ಚಿದ್ದಾರೆ. ಹಾಗಾಗಿ ಎಲ್ಲಾ ಸಾಮಾನುಗಳನ್ನು ತುಂಬಿಕೊಂಡು ಗೂಡ್ಸ್ ವಾಹನಗಳಲ್ಲಿ ಊರಿನತ್ತ ತೆರಳುತ್ತಿದ್ದಾರೆ. ಇನ್ನು ಲಾಕ್ ಡೌನ್ ಫ್ರೀ ಆದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಷ್ಟೊಂದು ಟ್ರಾಫಿಕ್ ಸಮಸ್ಯೆ ಕಂಡು ಬರುತ್ತಿದೆ.

- Advertisement -

Latest News

error: Content is protected !!