ಹೊಸದಿಲ್ಲಿ: ಕೊರೋನ ವೈರಸ್ ನಿಂದಾಗಿ ಜಗತ್ತೇ ಕಂಗಾಲಾಗಿದ್ದು, ಇದುವರೆಗೂ ಕಂಡು ಕೇಳರಿಯದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಲಾಕ್ ಡೌನ್ 4 ಖಚಿತ ಎಂದು ತಿಳಿಸಿದ್ದಾರೆ.
ಕರೊನಾ ವೈರಸ್ ಇನ್ನೂ ಸುದೀರ್ಘ ಸಮಯಗಳವರೆಗೆ ನಮ್ಮೊಂದಿಗೇ ಇರಲಿದೆ. ವೈರಸ್ನೊಂದಿಗೇ ಬದುಕಲು ಕಲಿಯಿರಿ ಎಂದು ಹಲವು ವಿಜ್ಞಾನಿಗಳು, ತಜ್ಞರು ಹೇಳಿದ್ದಾರೆ. ಹಾಗೇ, ಎಲ್ಲ ರಾಜ್ಯಗಳ ಕೊವಿಡ್-19ರ ಪರಿಸ್ಥಿತಿ, ಆರ್ಥಿಕತೆ ಸ್ಥಿತಿಯ ವರದಿಯನ್ನು ಆಯಾ ಮುಖ್ಯಮಂತ್ರಿಗಳಿಂದ ಪಡೆಯಲಾಗಿದೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಲಾಕ್ಡೌನ್ ನಾಲ್ಕನೇ ಹಂತವನ್ನು ಕೆಲವು ಹೊಸ ನಿಯಮಗಳೊಂದಿಗೆ ಜಾರಿ ಮಾಡಲಾಗುವುದು. ನಾಲ್ಕನೇ ಹಂತದ ಲಾಕ್ಡೌನ್ ಹೇಗಿರಲಿದೆ, ಅದರ ರೂಪುರೇಷೆಗಳೇನು ಎಂಬುದನ್ನು ಮೇ 18ಕ್ಕೂ ಮೊದಲೇ ದೇಶದ ಜನರಿಗೆ ತಿಳಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ಇದೇ ಸಂದರ್ಭ ಅವರು, ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು. ಸ್ಥಳೀಯ ಉತ್ಪನ್ನಗಳನ್ನು ಜನರು ಖರೀದಿಸಬೇಕು, ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು ಎಂದರು.


