Sunday, June 29, 2025
Homeಇತರಹಲ್ಲಿ ಬಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥ

ಹಲ್ಲಿ ಬಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥ

spot_img
- Advertisement -
- Advertisement -

ಜೈಪುರ: ಮದುವೆ ಸಮಾರಂಭದಲ್ಲಿ ಹಲ್ಲಿ ಬಿದ್ದಿದ್ದ ಮಜ್ಜಿಗೆಯನ್ನು ಕುಡಿದು 16 ಮಂದಿ ಅಸ್ವಸ್ಥರಾಗಿರುವ ಘಟನೆ ಭರತ್ ಪುರದ ಅಟಾವಿ ಗ್ರಾಮದ ಪಹಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಧುವರ ಸೇರಿದಂತೆ ಅಸ್ವಸ್ಥಗೊಂಡ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಲ್ಲಿ ಐವರೂ ಮಕ್ಕಳೂ ಸೇರಿದ್ದಾರೆ. ವಿವಾಹದ ನಂತರ ವಧುವನ್ನು ಬೀಳ್ಕೊಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮದುವೆ ಮಂಟಪಕ್ಕೆ ಹೊರಡುವ ಮುನ್ನ ನವದಂಪತಿಗೆ ಹಾಗೂ ಅವರೊಂದಿಗಿದ್ದ ಸಂಬಂಧಿಕರಿಗೆ ಮಜ್ಜಿಗೆ ಬಡಿಸಲಾಯಿತು. ಈ ವೇಳೆ ಮಜ್ಜಿಗೆ ಕುಡಿದ 16 ಮಂದಿ ವಿಷಯುಕ್ತ ಆಹಾರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಸ್ವಸ್ಥಗೊಂಡವರು ಸಿಕ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಎಲ್ಲರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಬ್ಲಾಕ್ ಮುಖ್ಯ ವೈದ್ಯಕೀಯ ಹಾಗು ಆರೋಗ್ಯ ಅಧಿಕಾರಿ ಮಯಾಂಕ್ ಶರ್ಮಾ ತಿಳಿಸಿದ್ದಾರೆ.  

- Advertisement -
spot_img

Latest News

error: Content is protected !!